





ನೆಲ್ಯಾಡಿ: ಮೂಲತ: ಬಲ್ಯ ನಿವಾಸಿಯಾಗಿದ್ದು ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಸಕಲೇಶಪುರದ ಹೋಂಕ್ರಳ್ಳಿ ಎಂಬಲ್ಲಿ ವಾಸ್ತವ್ಯವಿದ್ದ ವಿಠಲ ಆಚಾರ್ಯ(75ವ.)ರವರು ಹೋರಿ ತಿವಿದು ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಎ.21ರಂದು ಮಧ್ಯಾಹ್ನ ನಡೆದಿದೆ.


ವಿಠಲ ಆಚಾರ್ಯ ಅವರು ಮೇಯಲು ಕಟ್ಟಿದ್ದ ತಮ್ಮ ಹಸುವನ್ನು ಮನೆ ಕಡೆಗೆ ಕರೆ ತರುತ್ತಿದ್ದ ವೇಳೆ ಕಟ್ಟಿ ಹಾಕಿದ್ದ ಹೋರಿಯೊಂದು ಹಗ್ಗ ಬಿಚ್ಚಿಸಿಕೊಂಡು ಬಂದು ಹಸು ಕರೆತರುತ್ತಿದ್ದ ವಿಠಲ ಆಚಾರ್ಯರವರಿಗೆ ತಿವಿದಿದೆ. ಘಟನೆಯಿಂದ ಗಂಭೀರ ಗಾಯಗೊಂಡು ನೆಲಕ್ಕೆ ಬಿದ್ದಿದ್ದ ವಿಠಲ ಆಚಾರ್ಯರವರನ್ನು ಸ್ಥಳೀಯರು ಉಪಚರಿಸಿದರೂ ಅವರು ಮೃತಪಟ್ಟರೆಂದು ವರದಿಯಾಗಿದೆ.





ಬಲ್ಯ ಗ್ರಾಮದ ಅಂಬಟೆದಡಿ ನಿವಾಸಿ ದಿ.ಕುಂಞಣ್ಣ ಆಚಾರ್ಯ ಹಾಗೂ ದಿ.ಲಕ್ಷ್ಮೀ ದಂಪತಿಯ ಪುತ್ರರಾದ ವಿಠಲ ಆಚಾರ್ಯರವರಿಗೆ ಸಕಲೇಶಪುರ ಕಡೆಯಿಂದ ವಿವಾಹವಾಗಿದ್ದು ಆ ಬಳಿಕ ಅವರು ಸಕಲೇಶಪುರ ಹೊಂಕ್ರಳ್ಳಿ ಎಂಬಲ್ಲಿ ಮನೆ ಮಾಡಿ ಅಲ್ಲಿಯೇ ವಾಸ್ತವ್ಯವಿದ್ದು. ಕೃಷಿಯಲ್ಲಿ ತೊಡಗಿಕೊಂಡಿದ್ದರು. ವಿಠಲ ಆಚಾರ್ಯರ ಸಹೋದರರ ಪುತ್ರರು ಬಲ್ಯದಲ್ಲಿ ವಾಸ್ತವ್ಯವಿದ್ದಾರೆ. ಮೃತ ವಿಠಲ ಆಚಾರ್ಯ ಅವರು ಪತ್ನಿ ನಾಗಮ್ಮ, ಪುತ್ರ ವಿಶ್ವನಾಥ, ಪುತ್ರಿ ಶಾಲಿನಿ, ಅಳಿಯ,ಸೊಸೆ,ಮೊಮ್ಮಕ್ಕಳನ್ನು ಅಗಲಿದ್ದಾರೆ.






