ಕೊಂಬಾರು: ಕಬಡ್ಡಿ ಆಟಗಾರ ಕೋಕಿಲಾನಂದ ನಿಧನ

0

ಕಡಬ: ಮೆದುಳು ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಸಿದ್ದ ಕಬಡ್ಡಿ ಆಟಗಾರ, ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿ ಶಿನಪ್ಪ ಗೌಡರ ಪುತ್ರ ಕೋಕಿಲಾನಂದ (36ವ.) ಎಂಬವರು ಏ.24ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಮಿದುಳು ರಕ್ತಸ್ರಾವ ಉಲ್ಬಣಗೊಂಡು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಚಿಕಿತ್ಸೆಯ ನೆರವಿಗಾಗಿ ಅನೇಕ ಸಂಘ ಸಂಸ್ಥೆಗಳು, ಗ್ರಾಮದ ನಿವಾಸಿಗಳು, ಕಬಡ್ಡಿ ಪ್ರೇಮಿಗಳು ಆರ್ಥಿಕ ಸಹಕಾರ ನೀಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಮೃತರು ತಾಯಿ, ಪತ್ನಿ ಚೈತ್ರ, ಮಗಳು ಹಾಗೂ ಸಹೋದರರನ್ನು ಅಗಲಿದ್ದಾರೆ.


ಮೃತದೇಹ ಮಂಗಳೂರಿನಿಂದ ಬರುತ್ತಿದ್ದು, ಕಡಬದಲ್ಲಿ ಅವರ ಅಭಿಮಾನಿಗಳು ಸಾರ್ವಜನಿಕರು ಅಂತಿಮ ದರ್ಶನಕ್ಕೆ ಸೇರಿದ್ದಾರೆ.

LEAVE A REPLY

Please enter your comment!
Please enter your name here