ರಾಮಕುಂಜ: ಚಲಿಸುತ್ತಿದ್ದ ಆಟೋ ರಿಕ್ಷಾದಿಂದ ಬಿದ್ದು ಕೂಲಿಕಾರ್ಮಿಕ ಮಹಿಳೆಯೋರ್ವರು ಗಾಯಗೊಂಡಿರುವ ಘಟನೆ ಎ.21ರಂದು ಬೆಳಿಗ್ಗೆ ಕೊೖಲದಲ್ಲಿರುವ ರಾಮಕುಂಜ ಹಾಲಿನ ಡೈರಿ ಬಳಿ ನಡೆದಿದೆ.
ಕುಷ್ಟಗಿ ತಾಲೂಕಿನ ನಿವಾಸಿ ಭೀಮವ್ವ ಗಾಯಗೊಂಡವರಾಗಿದ್ದಾರೆ. ಇವರು ಪೆರಾಬೆ ಗ್ರಾಮದ ಕೋಚಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಕೂಲಿ ಕೆಲಸಕ್ಕೆಂದು ಇತರೇ ಕಾರ್ಮಿಕರ ಜೊತೆ ಬಸ್ಸಿನಲ್ಲಿ ಕೊೖಲ ತನಕ ಬಂದು ಅಲ್ಲಿಂದ ಚಂದ್ರಶೇಖರ ಎಂಬವರ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ರಾಮಕುಂಜ ಹಾಲಿನ ಡೈರಿ ಬಳಿ ರಿಕ್ಷಾವನ್ನು ತಿರುಗಿಸಿದಾಗ ರಿಕ್ಷಾದ ಬಲ ಬದಿಯ ಬಾಗಿಲು ತೆರೆದುಕೊಂಡು ಭೀಮವ್ವ ರಸ್ತೆಗೆ ಬಿದ್ದಿದ್ದಾರೆ. ಬಳಿಕ ಭೀಮವ್ವರನ್ನು ಅದೇ ರಿಕ್ಷಾದಲ್ಲಿ ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.