ದಿ ಬ್ರೈಟ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ಪ್ರಾರಂಭ
ಪುತ್ತೂರು: ವೈದ್ಯಕೀಯ ಕ್ಷೇತ್ರದಲ್ಲಿ ಬಹುಬೇಡಿಕೆಯಿರುವ ಪ್ಯಾರಾಮೆಡಿಕಲ್ ಕಲಿಯಲು ಆಸಕ್ತಿಯಿರುವವರಿಗೆ ‘ದಿ ಬ್ರೈಟ್ ಪ್ಯಾರಾಮೆಡಿಕಲ್ ಕಾಲೇಜು’ ಸುವರ್ಣಾವಕಾಶವನ್ನು ಒದಗಿಸುತ್ತಿದೆ. ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯ ಆವರಣದಲ್ಲಿ ಈಗಾಗಲೇ ದಾಖಲಾತಿ ನಡೆಯುತ್ತಿದ್ದು ಹಲವರು ದಾಖಲಾತಿ ಮಾಡಿಕೊಂಡಿದ್ದಾರೆ. ಇಲ್ಲಿ ಎಸ್ಸೆಸ್ಸೆಲ್ಸಿ ಪಾಸ್ ಆದವರು, ಪ್ರಥಮ/ದ್ವಿತೀಯ ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರವೇಶ ಪಡೆಯಬಹುದಾಗಿದೆ.
ಲಭ್ಯವಿರುವ ಕೋರ್ಸ್ಗಳು:
ಇಲ್ಲಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಎಕ್ಸ್ರೇ ಟೆಕ್ನಾಲಜಿ ಹಾಗೂ ಇನ್ನಿತರ ಅತೀ ಬೇಡಿಕೆಯಿರುವ ಕೋರ್ಸುಗಳು ಲಭ್ಯವಿದೆ. ಆರ್ಥಿಕವಾಗಿ ಕಷ್ಟದಲ್ಲಿರುವವರು ಕಂತುಗಳ ಮೂಲಕವೂ ಫೀಸ್ ಪಾವತಿಸಲು ಸಂಸ್ಥೆ ಅವಕಾಶ ನೀಡುತ್ತಿದ್ದು ಇದು ವಿದ್ಯಾರ್ಥಿಗಳ ಪಾಲಿಗೆ ಬಹು ಉಪಯುಕ್ತವಾಗಿದೆ.
ಸೀಮಿತ ಸೀಟುಗಳು ಲಭ್ಯ:
ಸಂಸ್ಥೆಯಲ್ಲಿ ಈಗಾಗಲೇ 2025-26ನೇ ಸಾಲಿನ ದಾಖಲಾತಿ ನಡೆಯುತ್ತಿದ್ದು ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ. ಆಸಕ್ತರು ಕೂಡಲೇ ಸಂಸ್ಥೆಯನ್ನು ಸಂಪರ್ಕಿಸುವಂತೆ ದಿ ಬ್ರೈಟ್ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7259367228, 7259527228 ನಂಬರನ್ನು ಸಂಪರ್ಕಿಸಬಹುದಾಗಿದೆ.