ಪುತ್ತೂರು: ಶ್ರೀ ದುರ್ಗಾಂಬ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಇಂದ್ರಜಿತು ಕಾಳಗ ತಾಳಮದ್ದಳೆ ಜರಗಿತು.
ಭಾಗವತರಾಗಿ ಡಿ. ಕೆ ಆಚಾರ್ಯ ಹಳೆನೇರೆಂಕಿ, ಹಿಮ್ಮೇಳದಲ್ಲಿ ಮುರಳೀಧರ ಕಲ್ಲೂರಾಯ, ಚಂದ್ರ ದೇವಾಡಿಗ ನಗ್ರಿ, ಅರ್ಥದಾರಿಗಳಾಗಿ (ರಾಮ1) ಜಯರಾಮ ಗೌಡ ಬಲ್ಯ,(ಇಂದ್ರಜಿತು) ಜಬ್ಬಾರ್ ಸಮೋ ಸಂಪಾಜೆ, (ಹನುಮಂತ) ದಿವಾಕರ ಆಚಾರ್ಯ ಹಳೆನೇರೆಂಕಿ,(ಮಾಯಾ ಸೀತೆ 1) ಗುರು ಪ್ರಸಾದ್ ಆಲಂಕಾರು,(ಮಾಯಾ ಸೀತೆ 2) ರಾಘವೇಂದ್ರ ಭಟ್ ತೋಟಂತಿಲ, (ವಿಭೀಷಣ ) ರಾಮ್ ಪ್ರಸಾದ್ ಆಲಂಕಾರು, (ರಾಮ2) ನಾರಾಯಣ ಭಟ್ ಆಲಂಕಾರು,(ಲಕ್ಷ್ಮಣ)ಗುರು ಪ್ರಸಾದ್ ಆಲಂಕಾರು ಭಾಗವಹಿಸಿದ್ದರು.
ಶ್ರೀನಿವಾಸ ರಾವ್ ಮತ್ತು ಮಕ್ಕಳು ಶರವೂರು,ನಾರಾಯಣ ಭಟ್ ಮತ್ತು ಮಕ್ಕಳು ಆಲಂಕಾರು ದಿವಾಕರ ಆಚಾರ್ಯ ಮತ್ತು ಮಕ್ಕಳು ಹಳೆನೇರೆಂಕಿ ಸೇವಾಾರ್ಥಿಗಳಾಗಿದ್ದರು.
ಕಾರ್ಯದರ್ಶಿ ದಿವಾಕರ ಆಚಾರ್ಯ ಹಳೆನೇರೆಂಕಿ ಸ್ವಾಗತಿಸಿ, ಕೋಶಾಧಿಕಾರಿ ರಾಮ್ ಪ್ರಸಾದ್ ಆಲಂಕಾರು ವಂದಿಸಿದರು . ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.