ಕುಂಬ್ರ: ಪೈಪ್ ಲೈನ್ ಕಾಮಗಾರಿಯಿಂದಾಗಿ ರಸ್ತೆ ಅಸ್ತವ್ಯಸ್ಥಗೊಂಡು ಸಾರ್ವಜನಿಕರು ಸಂಕಷ್ಟಪಡುವಂತ ಸ್ಥಿತಿ ನಿರ್ಮಾಣವಾದ ಘಟನೆ ಶೇಖಮಲೆ-ಅರಿಯಡ್ಕ-ತ್ಯಾಗರಾಜ ರಸ್ತೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಶೇಖಮಲೆ-ಅರಿಯಡ್ಕ-ತ್ಯಾಗರಾಜ ರಸ್ತೆಯಲ್ಲಿ ಪೈಪ್ ಲೈನ್ ಕಾಮಗಾರಿ ಹಿನ್ನಲೆ ರಸ್ತೆ ಅಸ್ತವ್ಯಸ್ಥಗೊಂಡಿದ್ದು, ಸಾರ್ವಜನಿಕರು ನಡೆದಾಡಲೂ ಸಂಕಷ್ಟಪಡುವ ಸ್ಥಿತಿ ನಿರ್ಮಾಣಗೊಂಡಿದೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡ ಕ್ರಮಕೈಗೊಂಡು ಶೀಘ್ರ ರಸ್ತೆ ದುರಸ್ಥಿಗೊಳಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.