ಅಕ್ಷಯ ತೃತೀಯಕ್ಕೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಆಕರ್ಷಕ ಕೊಡುಗೆ

0

ಪುತ್ತೂರು: ಪುತ್ತೂರಿನ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಗ್ರಾಹಕರಿಗೆ ಆಕರ್ಷಕ ಕೊಡುಗೆ ನೀಡಲಾಗಿದೆ. ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸನ ಪುತ್ತೂರು, ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನ ಮಳಿಗೆಗಳಲ್ಲಿ ಈ ಆಫರ್ ಲಭ್ಯವಿದೆ.

ಸಂಸ್ಕೃತದಲ್ಲಿ ಅಕ್ಷಯ ಎಂದರೆ ಶಾಶ್ವತ ಎಂದರ್ಥ. ಅಕ್ಷಯ ತೃತೀಯ ಎಂಬುವುದು ಶುಭದ ಸಂಕೇತವಾಗಿದೆ. ಈ ದಿನದಂದು ಜನರು ಚಿನ್ನ ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಖರೀದಿಸುತ್ತಾರೆ. ಏಕೆಂದರೆ ಇದು ಕುಟುಂಬಕ್ಕೆ ಸಮೃದ್ಧಿ ಮತ್ತು ಆದೃಷ್ಟವನ್ನು ತರುತ್ತದೆ ಎಂಬುದು ನಂಬಿಕೆ. ಆದುದರಿಂದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ತಮ್ಮೆಲ್ಲ ನೆಚ್ಚಿನ ಗ್ರಾಹಕರಿಗೆ ಅಕ್ಷಯ ತೃತೀಯ ಪ್ರಯುಕ್ತ ಚಿನ್ನಾಭರಣಗಳ ಖರೀದಿಯಲ್ಲಿ ಪ್ರತೀ 10 ಗ್ರಾಂಗೆ 25೦೦ರೂ.ವರೆಗೆ ರಿಯಾಯಿತಿ ಹಾಗೂ ವಜ್ರಾಭರಣಗಳ ಖರೀದಿಯಲ್ಲಿ ಪ್ರತಿ ಕ್ಯಾರೆಟ್‌ಗೆ 7,೦೦೦ರೂ. ಕಡಿತ ಮತ್ತು ಬೆಳ್ಳಿಯ ಆಭರಣಗಳ ಖರೀದಿಗೆ ಪ್ರತಿ ಕೆ.ಜಿ.ಗೆ 3,೦೦೦ರೂ. ರಿಯಾಯಿತಿ ನೀಡಲಾಗುತ್ತಿದೆ.

1957ರಲ್ಲಿ ಆರಂಭಗೊಂಡ ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದೆ. ವಿಶ್ವಾಸ, ಪರಿಶುದ್ಧತೆ, ಪರಂಪರೆ, ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸಂಸ್ಥೆ ಮನೆಮಾತಾಗಿದೆ. ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ಚಿನ್ನ ಹಾಗೂ ವಜ್ರಾಭರಣಗಳ ಆಯ್ಕೆ ಮಳಿಗೆಯಲ್ಲಿ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ಚಿನ್ನ ಹಾಗೂ ವಜ್ರಾಭರಣಗಳ ಸಂಗ್ರಹವಿದ್ದು ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ.

ಪುರಾತನ ಆಭರಣಗಳ ವಿಭಾಗ “ಪ್ರಾಚಿ”ಯಲ್ಲಿ ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಆಂಟಿಕ್ ಚಿನ್ನಾಭರಣಗಳ ವಿವಿಧ ವಿನ್ಯಾಸಗಳು ಲಭ್ಯವಿದೆ. ಅದೇ ರೀತಿ “ಗ್ಲೋ” ವಜ್ರಾಭರಣ ವಿಭಾಗದಲ್ಲಿ ಸುಮಾರು 2,೦೦೦ಕ್ಕೂ ಮಿಕ್ಕಿದ ಡಿಸೈನ್‌ಗಳಲ್ಲಿ ಪ್ರಜ್ವಲಿಸುವ ಅದ್ಭುತ ವಜ್ರಾಭರಣಗಳ ಸಂಗ್ರಹವಿದೆ. “ಪಾರ್ಥ” ಪುರುಷರ ಚಿನ್ನಾಭರಣಗಳ ವಿಭಾಗದಲ್ಲಿ ಪುರುಷರ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್ ಕಡ, ಹೊಸ ವಿನ್ಯಾಸದ ಕ್ಯೂಬನ್ ಚೈನ್ಸ್, ಇಂಡೋ ಇಟಲಿಯನ್ ಚೈನ್ಸ್, ನವರತ್ನ ಉಂಗುರ, ವಿವಿಧ ವಿನ್ಯಾಸದ ಆಂಟಿಕ್ ಪದಕ, ಕಾಸ್ಟಿಂಗ್ ಪದಕ, ಹೊಸ ವಿನ್ಯಾಸದ ವಾಚ್ ಚೈನ್ಸ್ ಅಲ್ಲದೇ ಈ ಬಾರಿ ಗ್ರಾಹಕರಿಗೆ ಕೈಗೆಟುವ ದರದಲ್ಲಿ ಗುಣಮಟ್ಟದಲ್ಲಿ ಕೊರತೆ ಆಗದಂತೆ ಅದೇ ವಿನ್ಯಾಸಗಳನ್ನು ಹೊಸ ತಂತ್ರಜ್ಞಾನದ ಮುಖಾಂತರ ಹೆಚ್ಚು ಕಾಲ ಬಾಳಿಕೆ ಬರುವಂತಹ ಲೈಟ್‌ವೈಟ್ ಆಭರಣಗಳು, ಕಲ್ಲಿನ ಆಭರಣಗಳಲ್ಲಿಯೂ ಲೈಟ್‌ವೈಟ್ ಕಲೆಕ್ಷನ್, ಪೇಪರ್ ಕಾಸ್ಟಿಂಗ್ ಆಭರಣಗಳು, ವೆರೈಟಿ ಆಫ್ ಕಲ್ಲರ್ಸ್ ಆಭರಣಗಳು ಸೇರಿದಂತೆ ಇನ್ನು ಹಲವು ವಿನೂತನ ವಿನ್ಯಾಸದ ಆಭರಣಗಳ ಸಂಗ್ರಹವಿದೆ.

ಎಲ್ಲ ಮಳಿಗೆಗಳಲ್ಲಿ ಈ ಕೊಡುಗೆ ಲಭ್ಯ
ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಷರತ್ತುಗಳು ಅನ್ವಯದೊಂದೊಗೆ ಈ ಕೊಡುಗೆ ತಮ್ಮ ಎಲ್ಲ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here