ಕಾಣಿಯೂರು: ರಾಜ್ಯದ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಕುಟುಂಬ ಸಮೇತ ಮೇ.4ರಂದು ಭೇಟಿ ನೀಡಿದ್ದಾರೆ. ದೇವಾಲಯದಲ್ಲಿ ಸಂಕಲ್ಪ ನೆರವೇರಿಸಿ, ದೇವರ ದರ್ಶನ ಮಾಡಿ ಶೇಷ ಸೇವೆ ಸಮರ್ಪಿಸಿದರು. ಅರ್ಚಕ ರಾಜೇಶ್ ನಡ್ಯಂತಿಲ್ಲಾಯ ಸಚಿವರಿಗೆ ಪ್ರಸಾದ ನೀಡಿದರು. ಬಳಿಕ ಹೊಸಳಿಗಮ್ಮನ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.
ಸಚಿವರನ್ನು ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸ್ವಾಗತಿಸಿದರು. ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್ ಉಪಸ್ಥಿತರಿದ್ದರು.