ದ‌.ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘ, ಪುತ್ತೂರು ವಲಯದಿಂದ ವಾರ್ಷಿಕ ಕ್ರೀಡಾಕೂಟ, ವಾಲಿಬಾಲ್ ಪಂದ್ಯಾಟ 

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸಂಘ, ಪುತ್ತೂರು ವಲಯ ವತಿಯಿಂದ ವಾರ್ಷಿಕ ಕ್ರೀಡಾಕೂಟ ಹಾಗೂ ವಾಲಿಬಾಲ್ ಪಂದ್ಯಾಟ ಪುತ್ತೂರು ನೆಹರುನಗರ ಸುದಾನ ಶಾಲಾ ವಠಾರದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಅದೃಷ್ಟ ಟ್ರೇಡರ್ಸ್ ಈಶ್ವರಮಂಗಲ ಮಾಲಕರಾದ ಅನಂತ ಗಣಪತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸುಗಮ ಸಂಚಾರಕ್ಕೆ ವಾಹನವನ್ನು ಸಿದ್ಧಗೊಳಿಸುವಲ್ಲಿ ಗ್ಯಾರೇಜಿನ ಪಾತ್ರ ಬಹುಮುಖ್ಯ. ಈ ಗ್ಯಾರೇಜಿನಲ್ಲಿ ಕೆಲಸ ಮಾಡುವವರು ಪ್ರತಿದಿನ ಬಿಝಿ ಇರುತ್ತಾರೆ. ಈ ನಿಟ್ಟಿನಲ್ಲಿ ಒಂದು ದಿವಸ ಸುಖದಾಯಕವಾಗಿ ಕಳೆಯಲು ಮತ್ತು ಇತರ ಗ್ಯಾರೇಜು ಬಾಂಧವರ ಒಗ್ಗಟ್ಟು ಪ್ರದರ್ಶಿಸಲು ಇದೊಂದು ವೇದಿಕೆಯಾಗಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಪುತ್ತೂರು ವಲಯದ ಅಧ್ಯಕ್ಷ ಶರತ್ ಕುಮಾರ್ ರೈ ಸ್ವಾಗತಿಸಿದರು. ಪೂರ್ವಾಧ್ಯಕ್ಷ ಸುರೇಶ್ ಸಾಲಿಯನ್, ಕಾರ್ಯದರ್ಶಿ ದಿನೇಶ್, ಕೋಶಾಧಿಕಾರಿ ಪ್ರಕಾಶ್ ರೈ ಸಹಕರಿಸಿದರು. ಕ್ರೀಡಾ ಕಾರ್ಯದರ್ಶಿ ಪುರುಷೋತ್ತಮ್ ಕೋಲ್ಪೆ ವಂದಿಸಿದರು.

LEAVE A REPLY

Please enter your comment!
Please enter your name here