
ನೆಲ್ಯಾಡಿ: ಪರಸ್ಪರ ಜಗಳ ನಡೆದು ಯುವಕನೋರ್ವನ ಹತ್ಯೆ ನಡೆದಿರುವ ಘಟನೆ ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ಮೇ 9ರಂದು ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.

ಮಾದೇರಿ ನಿವಾಸಿ ಗಂಗಪ್ಪ ಗೌಡ ಎಂಬವರ ಪುತ್ರ ಶರತ್(35ವ.)ಮೃತಪಟ್ಟ ಯುವಕ. ಸಂಬಂಧಿಕ ಯುವಕ ಹಾಗೂ ಶರತ್ ಮಧ್ಯೆ ಜಗಳ ನಡೆದಿದ್ದು ಈ ವೇಳೆ ಶರತ್ ಮೃತಪಟ್ಟಿರುವುದಾಗಿ ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.