ಪುತ್ತೂರು: ಆರೋಗ್ಯ ಕ್ಷೇತ್ರದ ಕಳೆದ ಮೂವತ್ತು ವರ್ಷಗಳಿಂದ ತನ್ನದೇ ಹಲವು ವೈಶಿಷ್ಠ್ಯತೆಗಳೊಂದಿಗೆ ಸೇವೆ ನೀಡುತ್ತಿರುವ ದರ್ಬೆ ಉಷಾ ಮೆಡಿಕಲ್ಸ್‌ನವರ ಮೂರನೇ ಸಂಸ್ಥೆ ಉಷಾ ಮೆಡಿಕಲ್ಸ್ ಮೇ.12ರಂದು ನೆಹರುನಗರದ ಪೆಟ್ರೋಲ್ ಪಂಪ್ ಮುಂಭಾಗದ ಸುಲೈಮಾನ್ ಟವರ‍್ಸ್‌ನಲ್ಲಿ ಶುಭಾರಂಭಗೊಂಡಿತು.
ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಪುತ್ತೂರಿನಲ್ಲಿ ಎಲ್ಲಿಯೂ ದೊರೆಯದ ಔಷಧಿಗಳು ಉಷಾ ಮೆಡಿಕಲ್ಸ್‌ನಲ್ಲಿ ದೊರೆಯುತ್ತದೆ. ಯಾವುದೇ ಔಷಧಿಗಳು ಮಳಿಗೆಯಲ್ಲಿ ಲಭ್ಯವಿಲ್ಲ ಎಂಬ ಶಬ್ದವೇ ಇಲ್ಲ. ಗ್ರಾಹಕರ ಅವಶ್ಯಕತೆ, ಅನುಕೂಲಕ್ಕೆ ತಕ್ಕಂತೆ ಎಲ್ಲಾ ರೀತಿಯ ಸೇವೆ ನೀಡುತ್ತಿದೆ. ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಪಾಲಿಕ್ಲಿನಿಕ್‌ನ್ನು ಪರಿಚಯಿಸಿ ಸೇವೆ ನೀಡುತ್ತಿದೆ. ಸಂಸ್ಥೆಯ ಮೂರನೇ ಮಳಿಗೆ ನೆಹರು ನಗರದ ಹೃದಯ ಭಾಗದಲ್ಲಿ ಪ್ರಾರಂಭಗೊಂಡಿದ್ದು ಸಂಸ್ಥೆಯ ಮೂಲಕ ಜನರಿಗೆ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ದೊರೆಯಲಿ ಎಂದು ಹಾರೈಸಿದರು.
ಮಳಿಗೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ ನಗರ ಸಭಾ ಸದಸ್ಯ ಜೀವಂಧರ್ ಜೈನ್ ಮಾತನಾಡಿ, ಪುತ್ತೂರು ನಗರವು ವೇಗವಾಗಿ ಬೆಳೆಯುತ್ತಿದೆ. ಉದ್ಯಮಗಳು ನಗರದ ಮಧ್ಯ ಭಾಗ ಬಿಟ್ಟು ಹೊರಭಾಗಕ್ಕೆ ವಿಸ್ತಾರಗೊಳ್ಳುತ್ತಿದೆ. ಬೆಳೆಯುತ್ತಿರುವ ನೆಹರೂನಗರದಲ್ಲಿ ಉಷಾ ಮೆಡಿಕಲ್ಸ್‌ನ ಮೂರನೇ ಮಳಿಗೆ ಪ್ರಾರಂಭಗೊಂಡಿರುವುದು ಅಭಿನಂದನೀಯ. ಗುಣಮಟ್ಟದ ಔಷಧಿ ವಿತರಣೆಗೆ ಮನೆ ಮಾತಾಗಿರುವ ಉಷಾ ಮೆಡಿಕಲ್ಸ್‌ನ ಇನ್ನಷ್ಟು ಶಾಖೆಗಳು ಪ್ರಾರಂಭಗೊಳ್ಳಲಿ ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿದ್ದ ಸುದಾನ ವಸತಿಯುತ ಶಾಲಾ ಸಂಚಾಲಕ ರೇ.ಫಾ ವಿಜಯ ಹಾರ್ವಿನ್ ಮಾತನಾಡಿ, ಶಿಕ್ಷಣ ಮತ್ತು ಅರೋಗ್ಯ ಜನರಿಗೆ ಅತೀ ಅವಶ್ಯಕವಾದುದು. ಅರೋಗ್ಯ ಕ್ಷೇತ್ರದಲ್ಲಿ ಸುಧೀರ್ಘ ವರ್ಷಗಳ ಅನುಭವವಿರುವ ಉಷಾ ಮೆಡಿಕಲ್ಸ್‌ನ ಮೂರನೇ ಮಳಿಗೆ ಪ್ರಾರಂಭಗೊಂಡಿದ್ದು ಉತ್ತಮ ಸೇವೆಯ ಮೂಲಕ ಜನೋಪಯೋಗಿ ಸಂಸ್ಥೆಯಾಗಿ ಬೆಳೆಯಲಿ. ಔಷಧಿಗಾಗಿ ಮೆಡಿಕಲ್‌ಗೆ ಬರಲು ಅನಾನುಕೂಲವಾಗುವವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಮೊಬೈಲ್ ಯೂನಿಟ್ ಪ್ರಾರಂಭಿಸುವಂತೆ ಸಲಹೆ ನೀಡಿದರು.
ಕಟ್ಟಡದ ಮ್ಹಾಲಕ ಸತ್ಯಶಂಕರ ಭಟ್ ಮಾತನಾಡಿ, ಪುತ್ತೂರಿನಲ್ಲಿ ವೇಗವಾಗಿ ಬೆಳೆಯುತ್ತಿರುವ ನೆಹರು ನಗರದ ಬೆಳವಣಿಗೆಯಲ್ಲಿ ಉಷಾ ಮೆಡಿಕಲ್ ತನ್ನದೇ ಆದ ಕೊಡುಗೆ ನೀಡಿದೆ. ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತಿರುವ ಸಂಸ್ಥೆಯ ಇನ್ನಷ್ಟು ಹೆಸರುಗಳಿಸಲಿ ಎಂದರು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಮ್ಹಾಲಕಿ ಅರುಣಾ ಜಿ. ಭಟ್, ಮ್ಹಾಲಕರ ಮನೆಯವರು, ಸಿಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ವರ್ಷಲಕ್ಷ್ಮೀ ಪ್ರಾರ್ಥಿಸಿದರು. ಉಮೇಶ್ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮ್ಹಾಲಕ ಗಣೇಶ್ ಭಟ್ ವಂದಿಸಿದರು.

ಶೀಘ್ರದಲ್ಲಿ ಬೊಳುವಾರಿನಲ್ಲಿ ನಾಲ್ಕನೇ ಮಳಿಗೆ
ದರ್ಬೆಯಲ್ಲಿ ಪ್ರಾರಂಭಗೊಂಡಿರುವ ಉಷಾ ಮೆಡಿಕಲ್ ಪುತ್ತೂರಿಗೆ ಪಾಲಿ ಕ್ಲಿನಿಕ್‌ನ್ನು ಪ್ರಥಮ ಬಾರಿಗೆ ಪರಿಚಯಿಸಿ ಜನರಿಗೆ ಸೇವೆ ನೀಡುತ್ತಿದೆ. ಮೆಡಿಕಲ್‌ನ್ನು ಪ್ರಥಮ ಬಾರಿಗೆ ಹವಾನಿಯಂತ್ರಿತ ಮಳಿಗೆಯನ್ನು ಪ್ರಾರಂಭಿಸಿದೆ. ಪಂಜದಲ್ಲಿ ಎರಡನೇ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮೂರನೇ ಸಂಸ್ಥೆ ನೆಹರು ನಗರದಲ್ಲಿ ಪ್ರಾರಂಭಗೊಂಡಿದೆ. ನಾಲ್ಕನೇ ಸಂಸ್ಥೆಯು ಬೊಳುವಾರು ಪ್ರಗತಿ ಆಸ್ಪತ್ರೆ ಮುಂಭಾಗದ ಹಿರಣ್ಯ ಕಾಂಪ್ಲೆಕ್ಸ್‌ನಲ್ಲಿ ಶೀಘ್ರದಲ್ಲಿ ಶುಭಾರಂಭಗೊಳ್ಳಲಿದೆ. ಹೆಸರಾಂತ ಕಂಪನಿಯ ಔಷಧಿಗಳು, ಪೆಟ್‌ಫುಡ್, ಪಶು ಔಷಧಿಗಳು, ಸರ್ಜಿಕಲ್ ಸಾಮಾಗ್ರಿಗಳು, ವಾಟರ್ ಬೆಡ್, ವ್ಹೀಲ್ ಚೆಯರ್, ನೆಬಿಲೈಸರ್, ವಾಕಿಂಗ್ ಸ್ಟಿಕ್, ಮೆಡಿಕೇಟೆಡ್ ಫೂಟ್‌ವೇರ್, ಯೋಗ ಮ್ಯಾಟ್, ವಾಕರ್, ಕಾಸ್ಮೆಟಿಕ್ಸ್‌ಗಳು ಲಭ್ಯವಿದೆ.
-ಗಣೇಶ್ ಭಟ್, ಮ್ಹಾಲಕರು ಉಷಾ ಮೆಡಿಕಲ್