ಪುತ್ತೂರು: ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ಸವಣೂರು ಇದರ ಆಶ್ರಯದಲ್ಲಿ ಈ ಬಾರಿಯ ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳಲಿರುವ ಫೈಸಲ್ ಕಾಯರ್ಗ ಅವರಿಗೆ ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಟ್ರಸ್ಟ್ನ ಗೌರವಾಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಸಹಲ್ ಅವರು ಶಾಲು ಹಾಕಿ ಗೌರವಿಸಿದರು.
ರಝಕ್ ಎಸ್ ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈಡನ್ ಗೋಬಲ್ ಸ್ಕೂಲ್ನ ಕಾರ್ಯದರ್ಶಿ ಬಶೀರ್ ಚೆಡವು, ಸವಣೂರು ಗ್ರಾ.ಪಂ ಸದಸ್ಯ ರಝಾಕ್ ಕೆನರಾ, ಸವಣೂರು ಯೂತ್ ಫ್ರೆಂಡ್ಸ್ನ ಅಧ್ಯಕ್ಷ ಶರೀಫ್ ಸಿ.ಚ್, ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ನ ಜೊತೆ ಕಾರ್ಯದರ್ಶಿ ಸವಾದ್ ಪಟ್ಟೆ, ಲೆಕ್ಕ ಪರಿಶೋಧಿಕ ಅಶ್ರಫ್ ಅರಫಾ, ಸದಸ್ಯ ಇಕ್ಬಾಲ್ ಚಾಪಲ್ಲ ಉಪಸ್ಥಿತರಿದ್ದರು. ಟ್ರಸ್ಟ್ನ ಕಾರ್ಯದರ್ಶಿ ಫಾರೂಕ್ ಬಿ ಎಂ ಸ್ವಾಗತಿಸಿದರು. ಯಾಕೂಬ್ ಸವಣೂರು ವಂದಿಸಿದರು.