ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಸದುದ್ದೇಶದಿಂದ 1958ರಲ್ಲಿ ಸ್ಥಾಪನೆಯಾದ ವಿದ್ಯಾ ಸಂಸ್ಥೆ ಸಂತ ಫಿಲೋಮಿನಾ ಕಾಲೇಜು ಪುತ್ತೂರು. ಮಾನ್ಸಿಂಜರ್ ಆಂಟನಿ ಪತ್ರಾವೊರವರ ದೂರದೃಷ್ಟಿಯ ಕೂಸಾದ ಈ ವಿದ್ಯಾನಿಲಯ, ‘ಶಿಕ್ಷಣವೇ, ವ್ಯಕ್ತಿತ್ವ ಅಭಿವೃದ್ಧಿಯ ಮಾರ್ಗ’ ಎಂಬ ನಂಬಿಕೆಯಿಂದ ತನ್ನ ಅರ್ಧ ಶತಮಾನವನ್ನು ಮೀರಿದ ಇತಿಹಾಸದ ಪುಟಗಳಲ್ಲಿ, ಶ್ರೇಷ್ಠ ಹಾಗೂ ನೈತಿಕ ಮೌಲ್ಯವುಳ್ಳ ಶಿಕ್ಷಣವನ್ನು ನೀಡುವಲ್ಲಿ ಸಫಲವಾಗಿದೆ.
ಇದೀಗ, ಕಾಲೇಜಿನ ಹಿರಿಮೆಯ ಕಿರೀಟಕ್ಕೆ ಹೊಸದೊಂದು ಗರಿಯಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಅನುಮತಿ ಹಾಗೂ ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾನಿಲಯ ಅನುದಾನ ಆಯೋಗದ (UGC) ಶಿಫಾರಸುಗಳ ಮೂಲಕ “ಸ್ವಾಯತ್ತ” ಸ್ಥಾನಮಾನವನ್ನು ಅಧಿಕೃತವಾಗಿ ಪಡೆದು, ಕಾಲೇಜಿನ ಶೈಕ್ಷಣಿಕ ಪಯಣದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿರುವುದು,ಧನಾತ್ಮಕ ಪರಿವರ್ತನೆಯ ಸಂಕೇತವಾಗಿದೆ.
ಕಾಲೇಜು ಈಗಾಗಲೇ ಸತತ ಮೂರನೇ ಬಾರಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ (NAAC) ‘A’ಶ್ರೇಣಿಯನ್ನು ಪಡೆದಿರುವುದು ಸಂಸ್ಥೆಯ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಇದರೊಂದಿಗೆ, ಕಾಲೇಜು ISO 9001:2015 ಪ್ರಮಾಣಪತ್ರವನ್ನು ತನ್ನ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಾಗಿ ಪಡೆದಿದೆ. ಈ ಎಲ್ಲಾ ಮಾನ್ಯತೆಗಳು, ಈ ಸಂಸ್ಥೆಯ ಶ್ರಮ, ದೂರದೃಷ್ಟಿ ಮತ್ತು ಉತ್ತಮ ಆಡಳಿತ ಕ್ರಮಗಳನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.
ನವೀಕರಣೆ ಮತ್ತು ಪಠ್ಯಕ್ರಮದ ವೈವಿಧ್ಯತೆ:
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ (AICTE) ಉನ್ನತ ಮಾನದಂಡಗಳಿಗೆ ಸರಿಯಾದ ಶೈಕ್ಷಣಿಕ ವಾತಾವರಣವಿರುವುದಕ್ಕೆ, ಬಿಬಿಎ ಹಾಗೂ ಬಿಸಿಎ ಕೋರ್ಸ್ಗಳಿಗೆ AICTE ಯಿಂದ ಅನುಮೋದನೆ ಸಿಕ್ಕಿರುತ್ತದೆ. ಶೈಕ್ಷಣಿಕ ವರ್ಷ 2025-26 ರಿಂದ BBA (ಬಿಸಿನೆಸ್ ಅನಾಲಿಟಿಕ್ಸ್),BCA (ಡೇಟಾ ಅನಾಲಿಟಿಕ್ಸ್) ಮತ್ತು B.Sc (ಡೇಟಾ ಸೈನ್ಸ್) ಕೋರ್ಸ್ಗಳ ಆರಂಭದ ಮೂಲಕ ಕಾಲೇಜು ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಇದೇ ಪ್ರಯತ್ನದಲ್ಲಿ B.Com (CA/ACCA), ಡಿಜಿಟಲ್ ಮಾರ್ಕೆಟಿಂಗ್,BCA (ಸೈಬರ್ ಸೆಕ್ಯುರಿಟಿ/ರೊಬೋಟಿಕ್ಸ್ ಪ್ರಾಸೆಸ್ ಆಟೋಮೇಷನ್) ಮತ್ತು BBA (CS ಇಂಟಿಗ್ರೇಟೆಡ್/IBPS ಎಂಬೆಡ್ಡೆಡ್) ರೀತಿಯ ಆಡ್-ಆನ್ ಕೋರ್ಸುಗಳನ್ನೂ ನೀಡಲಾಗುತ್ತಿದೆ.
ಸ್ನಾತಕೋತ್ತರ ಪದವಿಗಳನ್ನೂ ಹೊಂದಿರುವ ಈ ಸಂಸ್ಥೆ, ಈಗಾಗಲೇ MSW, M.Com, MSc (Physics), MSc (Mathematics) ಕೋರ್ಸ್ಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಇದೀಗ AICTE ಅನುಮೋದಿತ ಹೊಸತಾದ MCA ಕೋರ್ಸ್ ಆರಂಭಿಸಿದೆ. ಈ ಕೋರ್ಸ್ನಲ್ಲಿ ಸೈಬರ್ ಸೆಕ್ಯುರಿಟಿ, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್ಗೆ ವಿಶೇಷ
ಪ್ರಾಮುಖ್ಯತೆಯನ್ನು ನೀಡಿದೆ.

ಸ್ವಾಯತ್ತತೆ – ಹೊಸ ಅಧ್ಯಾಯದ ಆರಂಭ
ಸ್ವಾಯತ್ತ ಸ್ಥಾನಮಾನವು ಕಾಲೇಜಿಗೆ ಬಹುಮೂಲ್ಯವಾದ ಸ್ವತಂತ್ರ ಪಠ್ಯರಚನೆ, ಹೊಸ ಕೋರ್ಸ್ಗಳ ಪ್ರಾರಂಭ, ಪರೀಕ್ಷಾ ವ್ಯವಸ್ಥೆ ನಡೆಸುವ ಅಧಿಕಾರಗಳನ್ನು ಒದಗಿಸುತ್ತಿದ್ದು, ಇದನ್ನು ಕಾಲೇಜು ಸಂಪೂರ್ಣ ಪಾರದರ್ಶಕತೆ ಮತ್ತು ಶೈಕ್ಷಣಿಕ ಸತ್ಯನಿಷ್ಠೆಯೊಂದಿಗೆ ನಿರ್ವಹಿಸುತ್ತಿದೆ. ಪ್ರಾಯೋಗಿಕ ಅಧ್ಯಯನಕ್ಕೆ ಒತ್ತು ನೀಡುವ ಮೂಲಕ ಪಠ್ಯಕ್ರಮವನ್ನು ವಿದ್ಯಾರ್ಥಿ
ಕೇಂದ್ರಿತವಾಗಿ ರೂಪಿಸಲು ಈ ಸ್ಥಾನಮಾನ ಸಹಕಾರಿಯಲಾಗಲಿದೆ.
ಸಂಸ್ಥೆಯ ಪ್ರೇರಕ ಶಕ್ತಿಗಳು
ಈ ಎಲ್ಲಾ ಸಾಧನೆಗಳ ಹಿಂದೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಅಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪೌಲ್ ಸಲ್ದಾನರವರ ಶಕ್ತಿಶಾಲಿ ಮಾರ್ಗದರ್ಶನ, ಸಂಸ್ಥೆಯ ಸಂಚಾಲಕರಾದ ಅತೀ ವಂದನೀಯ ಲಾರೆನ್ಸ್ ಮಸ್ಕರೆನ್ಹಾಸ್ ರವರ ಆಡಳಿತ ಸಾಮರ್ಥ್ಯ ಮತ್ತು ಪ್ರಾಂಶುಪಾಲರಾದ ವಂದನೀಯ ಡಾ. ಆಂಟೋನಿ ಪ್ರಕಾಶ್ ಮೊಂತೆರೋ ರವರ ಶ್ರದ್ಧೆ, ನಿಷ್ಠೆ ಹಾಗೂ ದೃಷ್ಟಿಕೋನದಿಂದ ಈ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಶಿಕ್ಷಕ ವೃಂದ, ಆಡಳಿತ ಸಿಬ್ಬಂದಿ, ಹಿರಿಯ ವಿದ್ಯಾರ್ಥಿಗಳು, ಪೋಷಕರು ಮತ್ತು ಸ್ನೇಹಿತರ ಸಹಕಾರವು ಈ ಸಾಧನೆಗೆ ಪೂರಕವಾಗಿದೆ.
ನವೀನತೆಯ ದಿಕ್ಕಿನಲ್ಲಿ ಶ್ರೇಷ್ಠ ಸಾಧನೆ
ಕರ್ನಾಟಕ ಇನೋವೇಶನ್ & ಟೆಕ್ನಾಲಜಿ ಸೊಸೈಟಿ (KITS) ಯು ರಾಜ್ಯಮಟ್ಟದ ಯೋಜನೆಯಡಿಯಲ್ಲಿ, ಈ ಕಾಲೇಜನ್ನು NAIN (New Age Innovation Network) 2.0 ನ ಅತಿಥೇಯ ಸಂಸ್ಥೆಯಾಗಿ ಆಯ್ಕೆಯಾಗಿರುವುದು, ಯುವ ಪ್ರತಿಭೆಗಳನ್ನು ಹೊಸ ಆವಿಷ್ಕಾರವನ್ನು ಮಾಡುವತ್ತ ಉತ್ತೇಜಿಸುವಲ್ಲಿ ಸಫಲ ವಾಗಿರುವುದು ಸಂಸ್ಥೆಯ ಇನ್ನೊಂದು
ಮಹತ್ವದ ಹೆಜ್ಜೆ. ಇನ್ನೊಂದೆಡೆ, ಸಂಸ್ಥೆಯ Institution’s Innovation Council (IIC) 2023–24 ನೇ ಶೈಕ್ಷಣಿಕ ವರ್ಷದಲ್ಲಿ ದೇಶದ ಉನ್ನತ ಶಿಕ್ಷಣ ಸಚಿವಾಲಯವು ನೀಡಲ್ಪಡುವ ” ತ್ರೀ ಸ್ಟಾರ್ ಮಾನ್ಯತೆ” ಹೊಂದಿದೆ. ಈ ಗೌರವವನ್ನು ದಕ್ಷಿಣ ಭಾರತದ ಕೇವಲ 99 ಸಂಸ್ಥೆಗಳಷ್ಟೇ ಗಳಿಸಿದ್ದು, ಇದು ಸಂತ ಫಿಲೋಮಿನಾ ಕಾಲೇಜಿನ ನಾವೀನ್ಯತೆಗೆ ಒತ್ತು ನೀಡುವ ಸಂಸ್ಕೃತಿಗೆ ದೊಡ್ಡ ಮನ್ನಣೆಯಾಗಿದೆ. ಹಲವಾರು ಕಾರ್ಯಾಗಾರಗಳು, ಹ್ಯಾಕಥಾನ್ಗಳು, ಉಪನ್ಯಾಸ ಸರಣಿಗಳು ಹಾಗೂ ಮೂಲಮಾದರಿಯ ಅಭಿವೃದ್ಧಿಯ ಕಾರ್ಯಾಗಾರಗಳು ಸಂಸ್ಥೆಯಲ್ಲಿ ನಡೆಯುತ್ತಿದ್ದು, ನೈಪೂಣ್ಯತೆಯ ವೃದ್ಧಿಗೆ ಸಹಾಯ ಮಾಡಿವೆ.
ಸಂಸ್ಥೆಯ ಸಮಗ್ರ ಶೈಕ್ಷಣಿಕ ಸಾಂಸ್ಕೃತಿಕ ಚಟುವಟಿಕೆಗಳು
60ಕ್ಕಿಂತ ಹೆಚ್ಚು ಕಾರ್ಯನಿರ್ವಹಣಾ ಘಟಕಗಳು ಘಟಕಗಳು, ಕ್ರೀಡಾ ತಂಡಗಳು, ಸಾಂಸ್ಕೃತಿಕ ಘಟಕಗಳ ಮೂಲಕ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸವನ್ನು ಉದ್ದೀಪನಗೊಳಿಸಲಾಗುತ್ತಿದೆ. ಪ್ರಾಯೋಜಿತ ತರಬೇತಿಯೊಂದಿಗೆ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಹಾಗೂ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಬಹುಮಾನಗಳೊಂದಿಗೆ
ಪ್ರಶಂಸೆ ಗಳಿಸುತ್ತಿದ್ದಾರೆ. ಇನ್ನೂ ಮುಂದೆ, ICT ಅಕಾಡೆಮಿಯ ಸಹಯೋಗದಲ್ಲಿ ಸೈಬರ್ ಸೆಕ್ಯುರಿಟಿ ಸೇರಿ ಹಲವು ಪ್ರಮಾಣಿತ ತರಬೇತಿ ಕೋರ್ಸ್ಗಳನ್ನೂ ಕಾಲೇಜು ನೀಡುತ್ತಿದೆ. ಇದರಿಂದ ವಿದ್ಯಾರ್ಥಿಗಳು ಉದ್ಯೋಗಾಸಕ್ತರು ಮತ್ತು ಉಪಕ್ರಮಶೀಲರಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.
ಉತ್ಕೃಷ್ಟತೆಯ ಭವಿಷ್ಯದ ಭರವಸೆ
ಸಂತ ಫಿಲೋಮಿನಾ ಕಾಲೇಜು ಸ್ವಾಯತ್ತತೆಯನ್ನು ಪಡೆಯುವ ಮೂಲಕ, ತನ್ನ ಶೈಕ್ಷಣಿಕ ವ್ಯಾಪ್ತಿಯನ್ನು ಇನ್ನಷ್ಟು ಪಸರಿಸಲು ಸಜ್ಜಾಗಿದೆ. ಅಧ್ಯಯನದಲ್ಲಿ ಸಂಶೋಧನಾ ಮನೋಭಾವ, ಚಿಂತನ ಶಕ್ತಿ ಹಾಗೂ ನವೀನತೆಗೆ ಪ್ರೋತ್ಸಾಹ ನೀಡುವ ಮೂಲಕ ಜಾಗತಿಕ ಮಟ್ಟದ ನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ಆಡಳಿತ ಮಂಡಳಿ ತನ್ನ ಎಲ್ಲ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಗುಣಮಟ್ಟ ವೃದ್ಧಿಗೆ ಬದ್ಧವಾಗಿದ್ದು, ಈ ಪ್ರಕ್ರಿಯೆಯು ಈ ಸಂಸ್ಥೆಯ ಸ್ಥಾಪಕರ ಕನಸುಗಳನ್ನು ಕಾರ್ಯರೂಪಕ್ಕೆ ತರುವಂತೆ ಮಾಡುತ್ತಿದೆ
ಸ್ವಾಯತ್ತತೆಯು, ಈ ಸಂಸ್ಥೆಗೆ ಅನಿಯಂತ್ರಿತ ಶಕ್ತಿಯಲ್ಲ, ಬದಲಾಗಿ ನಿಯಮಬದ್ಧವಾದ ಸ್ವತಂತ್ರ ಚಿಂತನೆಯ, ಸಂಶೋಧನಾ ಚಾತುರ್ಯತೆಯ, ಮತ್ತು ಮೌಲ್ಯಾಧಾರಿತ ಪಠ್ಯವ್ಯವಸ್ಥೆಯ ನವಚೇತನವಾಗಿದೆ. ಈ ಹಂತದಲ್ಲಿ, ಕಾಲೇಜು ತನ್ನ ನೈತಿಕ ಬಲವನ್ನು ಅಧ್ಯಾತ್ಮ, ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಮಾನವಾಗಿ ನಿರೂಪಿಸುತ್ತಿದೆ.
“ವಿದ್ಯಾ ದಾನಾತ್ ಪರಂ ನಾಸ್ತಿ” ಎಂಬ ಧರ್ಮಶಾಸ್ತ್ರದ ಉದ್ಘೋಷದಂತೆ, ಇಲ್ಲಿ ಪ್ರತಿದಿನವೂ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಧಾರೆಯಾಗುತ್ತಿದೆ. ಈ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ಕೇವಲ ಉದ್ಯೋಗ ಆರಿಸಲು ಯೋಗ್ಯವಾದ ಪಾಠವನ್ನು ಮಾತ್ರವಲ್ಲದೇ ಜೀವನದ ನಿಜವಾದ ಅರ್ಥವನ್ನು ಸಾರುವ ಶ್ರದ್ಧೆ, ಶಿಷ್ಟಾಚಾರ ಹಾಗೂ ಸಮರ್ಥತೆಯೆಂಬ ತ್ರಿಸೂತ್ರವನ್ನು ಭೋದಿಸಿ ಜೀವನಕ್ಕೆ ದಾರಿದೀಪವಾಗಿದೆ.
“ಮಾನವೀಯ ಮೌಲ್ಯಗಳುೊಂದಿಗೆ ಭಾರತದ ಸುಸಂಸ್ಕೃತ ನಾಗರಿಕ ಸಮಾಜ ನಿರ್ಮಾಣದ ಸಲುವಾಗಿ ಸಕಾರಾತ್ಮಕ ಚಿಂತನೆ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದ ಉದ್ದೇಶಗಳಿಗೆ ಸಹಕಾರಿಯಾದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ಸಂಸ್ಥೆಯ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣ ಮತ್ತು ಆತ್ಮಶ್ರೀ ಸಿದ್ಧಿಗಾಗಿ ನಿರಂತರ
ಉಪಕ್ರಮಿಸಲು ಪೂರಕವಾದ ಸರ್ವ ಸಂಪನ್ನ ಶೈಕ್ಷಣಿಕ ಪರಿಸರ ಒದಗಿಸುವುದೇ ನಮ್ಮ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ಪರಮೋಚ್ಚ ಗುರಿಯಾಗಿದೆ.”

ಪ್ರಾಚಾರ್ಯರು , ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು