ಇರ್ವತ್ತೂರು ಪದವು: ಬದ್ರಿಯಾ ಜುಮಾ ಮಸೀದಿ ಇರ್ವತ್ತೂರಿನಲ್ಲಿ ಮತದಾನ ಬಹಳ ಯಶಸ್ವಿಯಾಗಿ ನಡೆಯಿತು.

ಇರ್ವತ್ತೂರಿನ ಮದ್ರಸ ಇತಿಹಾಸದಲ್ಲಿ ಸಾರ್ವತ್ರಿಕ ಚುನಾವಣೆಗಳಲ್ಲಿ ಹೇಗೆ ಭಾಗವಹಿಸಬೇಕೆಂಬ ಕಲ್ಪನೆ ಮೂಡಲಿ ಎಂಬ ಮಹಾದಾಸೆಯಲ್ಲಿ ಚುನಾವಣಾ ಪಕ್ರಿಯೆ ನಡೆಸಲಾಯಿತು. ವಿದ್ಯಾರ್ಥಿಗಳು ಬಹಳ ಉತ್ಸುಕತೆಯಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಎಂಟು ಮಂದಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಯಿತು.
ಪುರುಷರ ವಿಭಾಗದಲ್ಲಿ ಮೊಹಮ್ಮದ್ ಫೈಝ್, ಮುಹಮ್ಮದ್ ಅಮನ್, ಅಬ್ದುಲ್ ರಹಿಮಾನ್, ಮುಹಮ್ಮದ್ ಫಾಝಿಲ್, ಮಹಿಳೆಯರ ವಿಭಾಗದಲ್ಲಿ ಫಾತಿಮ ಶಭಾ, ರೀಹಾ ಫಾತಿಮ, ಖತೀಜ ಶಮ್ಲ, ಫಾತಿಮ ಸಲ್ವ ಚುನಾವಣಾ ರಂಗದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಸಂದರ್ಭದಲ್ಲಿ ಮದ್ರಸ ವಿದ್ಯಾರ್ಥಿನಿಯರಿಗೆ ನಮಾಝು ಮಾಡುವ ಉಡುಗೆ ಉಚಿತವಾಗಿ ಹಸ್ತಾಂತರಿಸಲಾಯಿತು.