ಬಡಗನ್ನೂರು : ಪಟ್ಟೆ ವಿದ್ಯಾಸಂಸ್ಥೆಗಳಿಗೆ ದ್ವಾರಕ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಪುತ್ತೂರು ಇವರ ವತಿಯಿಂದ ಸುಮಾರು 1,60,000ರೂ. ವೆಚ್ಚದಲ್ಲಿ ಇನ್ವರ್ಟರ್ ನ ವ್ಯವಸ್ಥೆ ಕಲ್ಪಿಸಿ ಕೊಡುವ ಮೂಲಕ ಗ್ರಾಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಸ್ಫೂರ್ತಿ ತುಂಬಿದೆ.
ಇಲ್ಲಿನ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಯಲ್ಲಿ 1ನೇ ರಿಂದ 7ನೇ ತರಗತಿಯವರೆಗೆ, ಪ್ರತಿಭಾ ಪ್ರೌಢಶಾಲೆಯಲ್ಲಿ 8 ನೇ ರಿಂದ 10ನೇ ತರಗತಿವರೆಗೆ ಶಿಕ್ಷಣ ದೊರೆಯುತ್ತಿದ್ದು ಎಲ್ಲಾ ತರಗತಿ ಕೋಣೆಗಳಿಗೂ ಮತ್ತು ಕಚೇರಿಗಳಿಗೆ ಇನ್ವರ್ಟರ್ ನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಈ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿದ್ದು, ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಮಕ್ಕಳಿಗೆ ಸರಿಯಾದ ಸ್ಮಾರ್ಟ್ ಕ್ಲಾಸ್ ಗಳನ್ನು ನಡೆಸಲು ಮತ್ತು ತರಗತಿ ನಡೆಸಲು ಬಹಳ ತೊಂದರೆ ಆಗುತ್ತಿತ್ತು. ಈ ವಿಚಾರವನ್ನು ಮನಗಂಡ ದ್ವಾರಕ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಪುತ್ತೂರು ಇವರ ವತಿಯಿಂದ ಇನ್ವರ್ಟರ್ ನ ವ್ಯವಸ್ಥೆಯನ್ನು ಮಾಡಿರುತ್ತಾರೆ ಇದಕ್ಕೆ ಸುಮಾರು ಅಂದಾಜು ವೆಚ್ಚ ರೂಪಾಯಿ 1,60,000(ಒಂದು ಲಕ್ಷದ ಅರುವತ್ತು ಸಾವಿರ )ಆಗಿದ್ದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ಅನಾನುಕೂಲ ಆಗದಂತೆ ಅಧ್ಯಯನಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ದ್ವಾರಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲ ಕೃಷ್ಣ ಭಟ್ .ಹೇಳಿದರು.