ಪುತ್ತೂರು: ಬನ್ನೂರು ಗ್ರಾಮದ ಗ್ರಾಮದೈವಗಳು ನೆಲೆನಿಂತ ಕಂಜೂರು ಕಜೆ ಪೊನ್ನೆ ಮಾಡ ಸ್ಥಳದಲ್ಲಿ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಮೇ.20ರಂದು ಸ್ಥಳ ಪರಿಸರದಲ್ಲಿ ತಂಬಿಲ ಸೇವೆ ನಡೆಯಿತು.
ಶಿಥಿಲಾವಸ್ಥೆಯಲ್ಲಿ ಇರುವ ಕಂಜೂರು ಕಜೆ ಪೊನ್ನೆ ಮಾಡ ಸ್ಥಳದ ಜೀರ್ಣೋದ್ದಾರ ಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಇದೀಗ ಪೊನ್ನೆ ಮಾಡ ಪರಿಸರದಲ್ಲಿ ತಂಬಿಲ ಸೇವೆ ನಡೆಯಿತು.
ದೈವದ ಪಾತ್ರಿ ಈಶ್ವರ ಗೌಡ ಗೋಳ್ತಿಲ ತಂಬಿಲ ಸೇವಾದಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಣಪ್ಪ ಕುಲಾಲ್, ಸದಸ್ಯರಾದ ವಿನೋದ್ ಕುಮಾರ್, ರೇವತಿ ಶೆಟ್ಟಿ, ಸುಮಲತಾ ಎನ್, ಚಂದ್ರಾಕ್ಷ ಬಿ.ಎನ್, ಮಹಾಬಲ ಪೂಜಾರಿ, ಜಿ.ಬಾಲಕೃಷ್ಣ, ಬಿ ದಯಾನಂದ, ಬನ್ನೂರು ಗ್ರಾ.ಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್, ಪ್ರಮುಖರಾದ ಜಯಕುಮಾರ್ ಜೈನ್, ರಾಜಶೇಖರ್ ರೈ ಜೈನ್, ಉದಯ ಮಯ್ಯ, ಕುಂಟ್ಯಾನ ದೇವಸ್ಥಾನದ ಮಾಜಿ ಅಧ್ಯಕ್ಷ ರಾಮಣ್ಣ ಗೌಡ, ಲಕ್ಷ್ಮಣ ಗೌಡ ಅಲಂಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.