ಕಡಬ: 2024-25ನೇ ಶೈಕ್ಷಣಿಕ ವರ್ಷದ 8ನೇ ತರಗತಿ ಮಕ್ಕಳಿಗೆ ಇಲಾಖಾ ವತಿಯಿಂದ ನಡೆಸಲ್ಪಟ್ಟ ರಾಷ್ಟ್ರೀಯ ಪ್ರತಿಭಾನ್ವೇಫಣಾ ಪರೀಕ್ಷೆ (ಎನ್ಎಂಎಂಎಸ್) ಯಲ್ಲಿ ಕುಂತೂರು ಪದವು ಸಂತ ಜಾರ್ಜ್ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ಪೆರ್ಲದಕೆರೆ ಧನಂಜಯ ಭಂಡಾರಿ ಮತ್ತು ಮಾಲಿನಿ ದಂಪತಿ ಪುತ್ರ ಕನಿಷ್ಕ ಮತ್ತು ಕೆಮ್ಮಣ್ಣು ಸತೀಶ್ ಮತ್ತು ರೂಪಾ ಇವರ ಪುತ್ರ ಲಿಖಿತ್ ವಿದ್ಯಾರ್ಥಿವೇತನವನ್ನು ಪಡೆಯಲು ಆಯ್ಕೆಯಾಗಿರುತ್ತಾರೆ. ಇವರು ವರ್ಷಕ್ಕೆ ರೂ.12 ಸಾವಿರದಂತೆ 4 ವರ್ಷ ಒಟ್ಟು 48 ಸಾವಿರ ರೂ. ವಿದ್ಯಾರ್ಥಿವೇತನವನ್ನು ಪಡೆಯಲಿದ್ದಾರೆ ಎಂದು ಶಾಲಾ ಮುಖ್ಯಗುರು ಹರಿಶ್ಚಂದ್ರ ಕೆ.ಅವರು ತಿಳಿಸಿದ್ದಾರೆ.