ಪುಣಚ: ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಡ್ಯನಡ್ಕ ವಲಯದ ಪುಣಚ ಸರವು ಅಂಗನವಾಡಿಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಜೂ.21ರಂದು ಆಚರಿಸಲಾಯಿತು.
ಶ್ರೀ ಮಹಿಷಮರ್ದಿನಿ ಪುಣಚ ಶಾಖೆಯ ಯೋಗ ಶಿಕ್ಷಕಿ ಭವ್ಯ ರವರು ಯೋಗ ತರಬೇತಿಯನ್ನು ನೀಡಿದರು. ಈ ಸಂಧರ್ಭ ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸ್ವಾತಿ, ಅಂಗನವಾಡಿ ಕಾರ್ಯಕರ್ತೆ ಹೇಮಮಾಲಿನಿ, ಸಹಾಯಕಿ, ಕಮಲ ಹಾಗೂ ಪುಟಾಣಿ ಮಕ್ಕಳು ತಾಯಂದಿರು ಉಪಸ್ಥಿತರಿದ್ದರು.
