ಪುತ್ತೂರು: ಷಣ್ಮುಖದೇವ ಪ್ರೌಢಶಾಲೆಯಲ್ಲಿ 2025-26 ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ತು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಮತದಾನದ ಮೂಲಕ ರಚನೆಯಾಯಿತು.
ಶಾಲಾ ನಾಯಕಿಯಾಗಿ ಯಶ್ಮಿತಾ,10 ನೇ ತರಗತಿ ಉಪ ನಾಯಕನಾಗಿ ಪುನೀತ್ 9 ನೇ ತರಗತಿ ,ಕ್ರೀಡಾ ಮಂತ್ರಿಯಾಗಿ ಶ್ರವಣ್ 10 ನೇ, ಆಹಾರ ಮಂತ್ರಿಯಾಗಿ ಭೂಮಿಕಾ ಕೆ 10 ನೇ,ಗ್ರಂಥಾಲಯ ಮಂತ್ರಿಯಾಗಿ ಹಿಮಾನಿ 10 ನೇ, ಕೃಷಿ ಮಂತ್ರಿಯಾಗಿ ಕೀರ್ತನ್ 10 ನೇ, ನೀರಾವರಿ ಮಂತ್ರಿಯಾಗಿ ಪೃಥ್ವಿನ್ 10 ನೇ, ಸಾಂಸ್ಕೃತಿಕ ಮಂತ್ರಿಯಾಗಿ ರಕ್ಷಾ 10 ನೇ,ಗೃಹ ಮಂತ್ರಿಯಾಗಿ ಪುನೀತ್ 10 ನೇ, ಸ್ವಚ್ಛತಾ ಮಂತ್ರಿಯಾಗಿ ಯುಪ್ತಿ 10 ನೇ, ಆರೋಗ್ಯ ಮಂತ್ರಿಯಾಗಿ ಪೂಜಾ 10 ನೇ, ವಿರೋಧ ಪಕ್ಷದ ನಾಯಕ ನಾಗಿ ಅಖಿಲ್ ಜಿ ಯು ಆಯ್ಕೆಯಾದರು. ಶಾಲೆಯ ಶಿಕ್ಷಕರಾದ ಅನಿರುದ್ಧ್ ಇವರ ಮಾರ್ಗದರ್ಶನದಲ್ಲಿ ಶಾಲಾ ಮುಖ್ಯ ಗುರು ಕೃಷ್ಣವೇಣಿ ಇವರ ಸಮಕ್ಷದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನೆರವೇರಿತು.ಶಾಲಾ ಸಿಬ್ಬಂದಿಗಳು ಸಹಕರಿಸಿದರು .