ಪುತ್ತೂರು: ಸಮಾಜದ ಮೂಲಕ ನಾವು ಗಳಿಸುವ ಆದಾಯದಲ್ಲಿನ ಒಂದಂಶವನ್ನು ರೋಟರಿ ಫೌಂಡೇಶನ್‌ಗೆ ನೀಡಿದಾಗ ಅದು ಒಳ್ಳೆಯ ಕಾರ್ಯಗಳಿಗೆ ಸದ್ವಿನಿಯೋಗವಾಗುತ್ತದೆ. ಸಮಾಜದಲ್ಲಿ ಯಾರು ತೊಂದರೆಗೆ ಒಳಗಾಗಿದ್ದಾರೋ ಅವರ ನೆರವಿಗೆ ಸ್ಪಂದಿಸುವುದು ಮಾನವೀಯತೆ. ಅದು ರೋಟರಿ ಸಂಸ್ಥೆ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ. ಭೂಮಿಯಲ್ಲಿ ಬದುಕಿರುವಷ್ಟು ದಿನ ಎಲ್ಲರೊಂದಿಗೆ ನಗುಮುಖದೊಂದಿಗೆ ಬಾಳುವ ಕನಸು ಕಾಣೋಣ ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ನಿಕಟಪೂರ್ವ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.

ಜು.1ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿದ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿಯ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ ಮಾತನಾಡಿದರು.
ಸಮಾಜದ ಒಳಿತಿಗಾಗಿ ನಿಜವಾದ ಸೇವೆ ಮಾಡಲು ಕಂಕಣ ಬದ್ಧರಾಗೋಣ-ಡಾ.ರಾಜಾರಾಮ್ ಕೆ.ಬಿ:
ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ್ ಕೆ.ಬಿರವರು ಕ್ಲಬ್ ಬುಲೆಟಿನ್ ‘ರೋಟ ವಿಕಾಸ’ನ್ನು ಬಿಡುಗಡೆಗೊಳಿಸಿ ಮಾತನಾಡಿ, ರೋಟರಿ ಮೂಲಕ ಪ್ರತಿ ರೊಟೇರಿಯನ್ಸ್ ಗಳು ನೀಡುವ ಆರ್ಥಿಕ ಶಕ್ತಿ ಅಶಕ್ತರ, ನಿರ್ಗತಿಕರ ಬಾಳಿಗೆ ಆಶಾಕಿರಣ ಮೂಡಿಸುವುದಾಗಿದೆ ಮಾತ್ರವಲ್ಲ ನಮ್ಮಲ್ಲಿ ವ್ಯಕ್ತಿತ್ವ ವಿಕಸನವಾಗುತ್ತದೆ, ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ. ಆದ್ದರಿಂದ ಸಮಾಜದ ಒಳಿತಿಗಾಗಿ ಧನಾತ್ಮಕ ಚಿಂತನೆಯೊಂದಿಗೆ ನಿಜವಾದ ಸೇವೆ ಮಾಡಲು ನಾವು ಕಂಕಣ ಬದ್ಧರಾಗುವ ಮೂಲಕ ರೋಟರಿಯ ಇಂಪು, ಕಂಪನ್ನು ಎಲ್ಲೆಡೆ ಪಸರಿಸೋಣ ಎಂದರು.
ಮೌಲ್ಯಾಧಾರಿತ ಸೇವೆಯಿಂದ ರೋಟರಿ ಸಂಸ್ಥೆಯನ್ನು ಬೆಳಗಿಸೋಣ-ಹರೀಶ್ ಸಿ.ಎಚ್:
ರೋಟರಿ ವಲಯ ಸೇನಾನಿ ಹರೀಶ್ ಸಿ.ಎಚ್ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜದಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡು ಬೆಳಕನ್ನು ಚೆಲ್ಲುವ ಕೈಂಕರ್ಯ ಮಾಡುತ್ತಿದೆ. ರೋಟರಿಯಲ್ಲಿನ ಐದು ವಲಯಗಳಲ್ಲಿ ಪ್ರತಿಯೋರ್ವರೂ ಮೌಲ್ಯಾಧಾರಿತ ಸೇವೆ ನೀಡುವ ಮೂಲಕ ರೋಟರಿ ಸಂಸ್ಥೆಯನ್ನು ಬೆಳಗಿಸೋಣ ಎಂದರು.

ಯೋಜನೆಗಳನ್ನು ಯಶಸ್ವಿಗೊಳಿಸಿದ ಸದಸ್ಯರಿಗೆ ಕೃತಜ್ಞತೆ-ಮೊಹಮ್ಮದ್ ಸಾಹೇಬ್:
ರೋಟರಿ ಕ್ಲಬ್ ಪುತ್ತೂರು ಸಿಟಿ ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಸಾಹೇಬ್ ಮಾತನಾಡಿ, ಪದ ಪ್ರದಾನ ದಿನದಿಂದ ಇಂದಿನವರೆಗೆ ಕ್ಲಬ್ ಸದಸ್ಯರು ಕ್ಲಬ್‌ನ ಐದು ವಲಯಗಳಲ್ಲಿನ ರೋಟರಿ ಯೋಜನೆಗಳಲ್ಲಿ ಸಹಕರಿಸಿದ್ದು ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ. ಜೊತೆಗೆ ಮುಂದಿನ ನೂತನ ತಂಡದ ಪ್ರತೀ ಚಟುವಟಿಕೆಗಳು ಯಶಸ್ವಿಯಾಗಲಿ ಎಂದರು.

ಸಮಾಜಮುಖಿ ಕಾರ್ಯಗಳಿಗೆ ಮಾತೃಸಂಸ್ಥೆ ಸದಾ ಬೆನ್ನೆಲುಬಾಗಿರುತ್ತದೆ-ಶಶಿಧರ್ ಕಿನ್ನಿಮಜಲು:
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಮಾತನಾಡಿ, ಕಳೆದ ವರ್ಷ ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಸಾಹೇಬ್ ರವರ ತಂಡಕ್ಕೆ ಅಭಿನಂದನೆಗಳು. ಸಮಾಜಕ್ಕೆ ಏನಾದರೂ ಅರ್ಪಣೆ ಮಾಡಬೇಕು ಎನ್ನುವ ಉದ್ದೇಶದೊಂದಿಗೆ ಹೆಜ್ಜೆಯನ್ನಿಟ್ಟಿರುವ ನೂತನ ಅಧ್ಯಕ್ಷ ಉಲ್ಲಾಸ್ ಪೈರವರ ತಂಡಕ್ಕೆ ಶುಭಾಶಯಗಳೊಂದಿಗೆ ಮಾತೃಸಂಸ್ಥೆ ರೋಟರಿ ಈಸ್ಟ್ ಸದಾ ಬೆನ್ನೆಲುಬಾಗಿ ಇರುತ್ತದೆ ಎಂದರು.

8 ಸದಸ್ಯರ ಸೇರ್ಪಡೆ;
ಕ್ಲಬ್ ಸರ್ವಿಸ್‌ನಡಿಯಲ್ಲಿ ಕೆನರಾ ಬ್ಯಾಂಕಿನ ಮುಖ್ಯ ಪ್ರಬಂಧಕರಾದ ವಿಠಲ ನಾಯ್ಕ್, ಪಿ.ಶ್ರೀರಾಮಪ್ಪ, ನಿವೃತ್ತ ರೇಂಜ್ ಫಾರೆಸ್ಟ್ ಆಫೀಸರ್ ಬಾಲಕೃಷ್ಣ ಶೆಟ್ಟಿ, ಉದ್ಯಮಿ ಮೋಡರ್ನ್ ಬ್ಯಾಟರೀಸ್‌ನ ಎಸ್.ಸಂತೋಷ್ ಕುಮಾರ್, ಸಂಪದ ಪೂಜಾ ಸೇಲ್ಸ್ ಮಾಲಕ ರಾಜೇಶ್ ಎಸ್, ಕೆನರಾ ಬ್ಯಾಂಕ್ ರೀಜ್ಹನಲ್ ಆಫೀಸ್‌ನ ಸೀನಿಯರ್ ಪ್ರಬಂಧಕ ಸುರೇಶ್ ಎಂ, ನ್ಯಾಯವಾದಿ ಕವನ್ ನಾಕ್ ದರ್ಬೆ, ಪ್ರಗತಿಪರ ಕೃಷಿಕ ರವೀಂದ್ರ ಕೆ. ಶಾಂತಿಗೋಡುರವರುಗಳನ್ನು ನಿಕಟಪೂರ್ವ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ನೂತನ ಸದಸ್ಯರಿಗೆ ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು. ಪ್ರಸ್ತುತ ಕ್ಲಬ್ 83 ಸದಸ್ಯರುಗಳನ್ನು ಹೊಂದಿರುತ್ತದೆ.
ಪ್ರತಿಭಾನ್ವಿತರಿಗೆ ಗೌರವ:
ಕಳೆದ ಸಾಲಿನ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ಎಸೆಸ್ಸೆಲ್ಸಿಯಲ್ಲಿ ಲಿಶೋನ್ ಲಸ್ರಾದೋ, ಪಿಯುಸಿಯಲ್ಲಿ ಜೊಸ್ವಿಟಾ ಪಾಯಿಸ್(ಡೆನ್ನಿಸ್ ಮಸ್ಕರೇನ್ಹಸ್ ಪ್ರಾಯೋಜಕತ್ವ), ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವೈಭವ್ ಪೂಜಾರಿ(ರಾಮಚಂದ್ರ ಪ್ರಾಯೋಜಕತ್ವ), ಶ್ರಾವ್ಯ ಎಚ್.ಬಿ(ಪಿಯುಸಿ), ಶ್ರೀಕೃಪಾ, ಆವಂತಿ ಶರ್ಮ, ವಿಜಿತ್ ಪೂಜಾರಿ(ಎಸೆಸ್ಸೆಲ್ಸಿ), ಕ್ಲಬ್ ಸದಸ್ಯರ ಮಕ್ಕಳಾದ ಮಹಾಲಕ್ಷ್ಮಿ ಕೆಮ್ಮಿಂಜೆರವರ ಪುತ್ರ ಕಾರ್ತಿಕ್ ಕೆಮ್ಮಿಂಜೆ(ಎಸೆಸ್ಸೆಲ್ಸಿ), ಕೃಷ್ಣಮೋಹನ್ ಪಿ.ಎಸ್‌ರವರ ಪುತ್ರ ಮನೀತ್ ಶಂಕರ್(ಪಿಯುಸಿ), ಎಸೆಸ್ಸೆಲ್ಸಿ ಪರೀಕ್ಷೆಯ ಸಂಸ್ಕೃತ ಪರೀಕ್ಷೆಯಲ್ಲಿ ನೂರು ಅಂಕ ಗಳಿಸಿದ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ನಿಶ್ಮಿತಾ ಆರ್, ನಿಶಾ ಎ.ಬಿ, ಭವಿಷ್ಯ, ರಕ್ಷಿತಾ(ಪ್ರಕಾಶ್ ಕೆ.ವಿ ಪ್ರಾಯೋಜಕತ್ವ)ರವರುಗಳಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ಟಿ.ಆರ್.ಎಫ್ ಕೊಡುಗೆ:
ಇಂಟರ್ನ್ಯಾಷನಲ್ ಸರ್ವಿಸ್ ವತಿಯಿಂದ ಅಂತರರಾಷ್ಟ್ರೀಯ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿದ ಕ್ಲಬ್ ಸದಸ್ಯರಾದ ಸುರೇಂದ್ರ ಕಿಣಿ, ಡಾ.ಹರಿಕೃಷ್ಣ ಪಾಣಾಜೆ, ಲಕ್ಷ್ಮೀಕಾಂತ್ ಆಚಾರ್ಯ, ಮೊಹಮ್ಮದ್ ಸಾದಿಕ್‌ರವರುಗಳಿಗೆ ಹೂ ನೀಡಿ ಅಭಿನಂದಿಸಲಾಯಿತು.
ವೈದ್ಯರುಗಳಿಗೆ/ಚಾರ್ಟರ್ಡ್ ಅಕೌಂಟೆಂಟ್/ ರಕ್ತದಾನಿಗೆ ಅಭಿನಂದನೆ:
ಜುಲೈ ಒಂದರಂದು ವೈದ್ಯರ ದಿನಾಚರಣೆ ಆಚರಿಸುವ ಸಂದರ್ಭ ಕ್ಲಬ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳಾದ ಡಾ.ಅಜಿತ್ ಹೆಗ್ಡೆ, ಡಾ.ಹರಿಕೃಷ್ಣ ಪಾಣಾಜೆ, ಡಾ.ಸೂರ್ಯನಾರಾಯಣ ಹಾಗೂ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ್ ಕೆ.ಬಿ, ಚಾರ್ಟರ್ಡ್ ಅಕೌಂಟೆಂಟ್ ಸಿಎ ಅರವಿಂದ ಕೃಷ್ಣ, ಸುಮಾರು ಎಂಟು ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದು, ಸುಮಾರು 600 ಯೂನಿಟ್ ರಕ್ತ ಸಂಗ್ರಹ ಮಾಡಿ ವಿಶೇಷ ಸಮಾಜ ಸೇವೆ ಮಾಡುವ ಮೂಲಕ ಗುರುತಿಸಲ್ಪಡುವ ಸದಸ್ಯ ವಿಕ್ಟರ್ ಮಾರ್ಟಿಸ್ ಹಾಗೂ ಬ್ಲಡ್ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರ ಪತ್ನಿ ಸಜಿನಿ ಮಾರ್ಟಿಸ್‌ರವರುಗಳನ್ನು ಅಭಿನಂದಿಸಲಾಯಿತು.
ಜಿಲ್ಲಾ ಪ್ರತಿನಿಧಿಗಳಿಗೆ ಗೌರವ:
ಕ್ಲಬ್ ಸದಸ್ಯರಾಗಿದ್ದು ಜಿಲ್ಲಾ ಪ್ರತಿನಿಧಿಗಳಾಗಿ ವಿವಿಧ ಸೇವಾ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲಿರುವ ಸುರೇಂದ್ರ ಕಿಣಿ, ಪ್ರಶಾಂತ್ ಶೆಣೈ, ಪ್ರಮೋದ್ ಮಲ್ಲಾರ, ಲಾರೆನ್ಸ್ ಗೊನ್ಸಾಲ್ವಿಸ್, ಸ್ವಾತಿ ಮಲ್ಲಾರ, ಗ್ರೇಸಿ ಗೊನ್ಸಾಲ್ವಿಸ್‌ರವರುಗಳನ್ನು ಅಭಿನಂದಿಸಲಾಯಿತು.

ಸಾಂಸ್ಕೃತಿಕ ಚೇರ್‌ಮ್ಯಾನ್ ಪ್ರೇಮ್ ಕುಮಾರ್ ಪ್ರಾರ್ಥಿಸಿದರು. 2023-24ನೇ ಸಾಲಿನ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ಕ್ಲಬ್ ನಿಯೋಜಿತ ಅಧ್ಯಕ್ಷ ಉಮೇಶ್ಚಂದ್ರ, ನೂತನ ಅಧ್ಯಕ್ಷ ಉಲ್ಲಾಸ್ ಪೈರವರ ಪತ್ನಿ ಸವಿತಾ ಪೈರವರು. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಸಾಹೇಬ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಡಾ.ಪೊಡಿಯ ವಂದಿಸಿದರು. ನಿಕಟಪೂರ್ವ ಕಾರ್ಯದರ್ಶಿ ರಾಮಚಂದ್ರ ವರದಿ ಮಂಡಿಸಿದರು. ಪದ ಪ್ರದಾನ ಅಧಿಕಾರಿ, ಅಸಿಸ್ಟೆಂಟ್ ಗವರ್ನರ್, ವಲಯ ಸೇನಾನಿ, ನೂತನ ಅಧ್ಯಕ್ಷರ ಯ ಪರಿಚಯವನ್ನು ಕಾರ್ತಿಕ್ ರೈ, ಲೀನಾ ಪಾಯಿಸ್, ಡಾ.ಹರಿಕೃಷ್ಣ ಪಾಣಾಜೆ, ಗ್ರೇಸಿ ಗೊನ್ಸಾಲ್ವಿಸ್‌ರವರು ನೀಡಿದರು. ಸದಸ್ಯರಾದ ಸುರೇಂದ್ರ ಕಿಣಿ, ಕೃಷ್ಣವೇಣಿ ರೈ, ಲೀನಾ ಪಾಯಿಸ್, ಕೃಷ್ಣವೇಣಿ ಮುಳಿಯರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಸಾರ್ಜಂಟ್ ಎಟ್ ಆಮ್ಸ್೯ ಸುಬ್ರಹ್ಮಣ್ಯ ಹೆಬ್ಬಾರ್, ಕ್ಲಬ್ ಸರ್ವಿಸ್ ನಿರ್ದೇಶಕ ಪ್ರಜ್ವಲ್ ರೈ, ವೊಕೇಶನಲ್ ಸರ್ವಿಸ್ ನಿರ್ದೇಶಕ ಧರ್ಣಪ್ಪ ಗೌಡ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ಜ್ಯೋ ಡಿ’ಸೋಜ, ಯೂತ್ ಸರ್ವಿಸ್ ನಿರ್ದೇಶಕ ಡೆನ್ನಿಸ್ ಮಸ್ಕರೇನ್ಹಸ್, ಬುಲೆಟಿನ್ ಎಡಿಟರ್ ಮನೋಹರ್ ಕೊಳಕ್ಕಿಮಾರ್‌ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕೃಷ್ಣಮೋಹನ್ ಪಿ.ಎಸ್ ಹಾಗೂ ಶ್ಯಾಮಲಾ ಪಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪದ ಪ್ರದಾನ…
ನೂತನ ಅಧ್ಯಕ್ಷ ಪೆರಾಜೆ ಉಲ್ಲಾಸ್ ಪೈ, ಕಾರ್ಯದರ್ಶಿ ಡಾ.ಪೊಡಿಯ, ಕೋಶಾಧಿಕಾರಿ ಸ್ವಾತಿ ಮಲ್ಲಾರ, ಸಾರ್ಜಂಟ್ ಎಟ್ ಆರ್ಮ್ಸ್ ಸುಬ್ರಹ್ಮಣ್ಯ ಹೆಬ್ಬಾರ್, ನಿಯೋಜಿತ ಅಧ್ಯಕ್ಷ ಉಮೇಶ್ಚಂದ್ರ, ಉಪಾಧ್ಯಕ್ಷ ಮೋಹನ ಕೆ, ಜೊತೆ ಕಾರ್ಯದರ್ಶಿ ಕಿರಣ್ ಬಿ.ವಿ, ಕ್ಲಬ್ ಸರ್ವಿಸ್ ನಿರ್ದೇಶಕ ಪ್ರಜ್ವಲ್ ರೈ, ವೊಕೇಶನಲ್ ಸರ್ವಿಸ್ ನಿರ್ದೇಶಕ ಧರ್ಣಪ್ಪ ಗೌಡ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಹರಿಣಿ ಸತೀಶ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಜ್ಯೋ ಡಿ’ಸೋಜ, ಯೂತ್ ಸರ್ವಿಸ್ ನಿರ್ದೇಶಕ ಡೆನ್ನಿಸ್ ಮಸ್ಕರೇನ್ಹಸ್, ಬುಲೆಟಿನ್ ಎಡಿಟರ್ ಮನೋಹರ್ ಕೆ, ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಸಾಹೇಬ್, ಚೇರ್‌ಮ್ಯಾನ್‌ಗಳಾದ ಡಾ.ಹರಿಕೃಷ್ಣ ಪಾಣಾಜೆ(ರೋಟರಿ ಫೌಂಡೇಶನ್), ಡಾ.ಅಜಿತ್ ಹೆಗ್ಡೆ(ಪೋಲಿಯೋ ಪ್ಲಸ್), ಶ್ಯಾಮಲಾ ಶೆಟ್ಟಿ(ಸಿಎಲ್‌ಸಿಸಿ), ಪದ್ಮನಾಭ ಶೆಟ್ಟಿ(ವಿನ್ಸ್), ದಯಾನಂದ ಕೆ.ಎಸ್(ವಾಟರ್ ಆಂಡ್ ಸ್ಯಾನಿಟೇಶನ್), ಸುರೇಂದ್ರ ಕಿಣಿ(ಜಿಲ್ಲಾ ಪ್ರಾಜೆಕ್ಟ್), ಜಯಕುಮಾರ್ ರೈ ಎಂ.ಆರ್(ಮೆಂಬರ್‌ಶಿಪ್ ಡೆವಲಪ್ಮೆಂಟ್), ಗುರುರಾಜ್ ಕೆ(ರೋಟರ‍್ಯಾಕ್ಟ್), ಲೀನಾ ಪಾಯಿಸ್(ಇಂಟರ‍್ಯಾಕ್ಟ್), ಜೋನ್ ಕುಟಿನ್ಹಾ(ಎಥಿಕ್ಸ್), ಮೋಹನ ಕೆ(ಪಬ್ಲಿಕ್ ರಿಲೇಶನ್), ಕೃಷ್ಣಮೋಹನ್ ಪಿ.ಎಸ್(ಕೆರಿಯರ್ ಗೈಡೆನ್ಸ್), ಲೋಹಿತ್(ಕ್ರೀಡೆ), ಪ್ರೇಮ್ ಕುಮಾರ್(ಸಾಂಸ್ಕೃತಿಕ), ರಾಮಚಂದ್ರ(ಸಾಮಾಜಿಕ ಜಾಲತಾಣ), ವಿಕ್ಟರ್ ಮಾರ್ಟಿಸ್(ಫೆಲೋಶಿಪ್), ಪ್ರಮೋದ್ ಮಲ್ಲಾರ(ವೆಬ್‌ಸೈಟ್)ರವರಿಗೆ ನಿಕಟಪೂರ್ವ ಜಿಲ್ಲಾ ಗವರ್ನರ್ ವಿಕ್ರಂ ದತ್ತರರವರು ಪದ ಪ್ರದಾನವನ್ನು ನೆರವೇರಿಸಿದರು.
ವಿಶ್ವಾಸದಿಂದ ಯೋಜನೆಗಳ ಸಾಕಾರಗೊಳಿಸೋಣ..
ಕ್ಲಬ್ ನೂತನ ಅಧ್ಯಕ್ಷನಾಗಿ ಆಯ್ಕೆಯಾಗಿ ಜವಾಬ್ದಾರಿಯನ್ನು ಖುಷಿಯಿಂದ ಸ್ವೀಕರಿಸುತ್ತಿದ್ದೇನೆ. ಎಲ್ಲರೊಂದಿಗೆ ಒಂದಾಗೋಣ ಅಂತರರಾಷ್ಟ್ರೀಯ ರೋಟರಿ ಧ್ಯೇಯವಾಕ್ಯದೊಂದಿಗೆ ಕ್ಲಬ್ ಸದಸ್ಯರ ವಿಶ್ವಾಸದ ಒಗ್ಗೂಡುವಿಕೆಯಿಂದ, ಹಿರಿಯ ಸದಸ್ಯರ ಸಲಹೆಯೊಂದಿಗೆ ಮನುಷ್ಯನ ಪ್ರಾಣ ಉಳಿಸುವ ಸಿಪಿಆರ್ ಯೋಜನೆ, ಅಂಗನವಾಡಿಗಳ ಮೇಲ್ದರ್ಜೆಗೇರಿಸುವಿಕೆ, ರಕ್ತದಾನದ ಭಯ ಹೋಗಲಾಡಿಸುವಿಕೆ ಅದರಲ್ಲೂ ಮಹಿಳೆಯರಲ್ಲಿ, ಸಂಘ-ಸಂಸ್ಥೆಗಳ ಮೂಲಕ ಸರಕಾರಿ ಶಾಲೆಗಳ ಉಳಿಸುವಿಕೆ, ಮಹಿಳೆಯರನ್ನು ಸ್ವಾವಲಂಭಿಗೊಳಿಸುವುದು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕ್ಲಬ್ ನ ಐದು ವಲಯಗಳಲ್ಲಿ ಕೆಲಸ ಮಾಡುವ ಮೂಲಕ ಸಾಕಾರಗೊಳಿಸೋಣ.
-ಉಲ್ಲಾಸ್ ಪೈ ಪಿ,
ನೂತನ ಅಧ್ಯಕ್ಷರು, ರೋಟರಿ ಪುತ್ತೂರು ಸಿಟಿ
ವ್ಹೀಲ್‌ಚೇರ್ ಕೊಡುಗೆ..
ನಡೆದಾಡಲು ಅಶಕ್ತರಾಗಿರುವ ಫಲಾನುಭವಿಗಳಾದ ಸರ್ವೆ ಗ್ರಾಮದ ಕೂಲಿ ಕಾರ್ಮಿಕ ನಾಗಪ್ಪ ನೆಕ್ಕಿಲು ಹಾಗೂ ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ಪಾರ್ವತಿರವರುಗಳಿಗೆ ವ್ಹೀಲ್‌ಚೇರ್‌ನ್ನು ಹಸ್ತಾಂತರಿಸಲಾಯಿತು. ಕ್ಲಬ್ ಸದಸ್ಯರಾದ ಜಯಕುಮಾರ್ ರೈ ಎಂ.ಆರ್ ಹಾಗೂ ಮಿತ್ರಂಪಾಡಿ ಜಯರಾಮ್ ರೈರವರು ವ್ಹೀಲ್‌ಚೇರ್‌ನ ಪ್ರಾಯೋಜಕತ್ವ ವಹಿಸಿದ್ದರು.
ಸನ್ಮಾನ..
ನರಿಮೊಗರು ನಿತ್ಯ ಫುಡ್ ಪ್ರಾಡಕ್ಟ್ ಸಂಸ್ಥೆಯ ಮೂಲಕ ನಿತ್ಯ ಚಪಾತಿ ಉತ್ಪನ್ನದ ಜೊತೆಗೆ ಸಿರಿಧಾನ್ಯ ತಯಾರಿ, ಹಲಸಿನ ಬೀಜದ ಮೌಲ್ಯವರ್ಧನೆ, ಅಣಬೆ ಬೇಸಾಯದ ಜೊತೆಗೆ ಸುಮಾರು 25 ರೀತಿಯ ಆಹಾರ ಉತ್ಪನ್ನಗಳನ್ನು ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡುವ ಮೂಲಕ ಕೌಶಲ್ಯತೆಯನ್ನು ಪ್ರಚುರಪಡಿಸಿ ಹಲವಾರು ಪ್ರಶಸ್ತಿಗಳ ಸರದಾರನಾಗಿದ್ದು, 2025ರಲ್ಲಿ ಬೆಂಗಳೂರಿನ ಐ.ಐ.ಎಚ್.ಆರ್ ಸಂಸ್ಥೆಯಿಂದ ಎಕ್ಸಲೆನ್ಸ್ ಇನ್ನೋವೇಟಿವ್ ಎಂಟರ್‌ಪ್ರಣಾರ್ ಅವಾರ್ಡ್‌ನ್ನು ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್‌ರವರಿಂದ ಸ್ವೀಕರಿಸಿರುವ ಕ್ಲಬ್ ಸದಸ್ಯ ರಾಧಾಕೃಷ್ಣ ಇಟ್ಟಿಗುಂಡಿ, ಹಾಗೂ ಮೂಲತಃ ಉಳ್ಳಾಲ ನಿವಾಸಿ, ಸಣ್ಣ ಹರೆಯದಲ್ಲಿ ತಂದೆಯನ್ನು ಕಳೆದುಕೊಂಡು ತನ್ನ ಅಜ್ಜನ ಮನೆ ನೆಲ್ಲಿಕಟ್ಟೆಯಲ್ಲಿ ವಾಸವಾಗಿ ಪುತ್ತೂರು ಹಾಗೂ ವಿವಿಧೆಡೆ ವಿದ್ಯಾಭ್ಯಾಸವನ್ನು ಮುಂದುವರೆಸಿ ಸ್ನಾತಕೋತ್ತರ ಪದವಿಯನ್ನು ಪಡೆದು 1951 ರಿಂದ ಮ್ಯಾಥ್ಸ್ ಟೀಚರ್ ಆಗಿ ಪಂಜ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ ಬಳಿಕ ಬೋರ್ಡ್ ಹೈ ಸ್ಕೂಲ್, ಸರಕಾರಿ ಜ್ಯೂನಿಯರ್ ಕಾಲೇಜ್ ಇಲ್ಲಿ ಸೇವೆ ಮುಂದುವರೆಸಿ 1983ರಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ 95 ವರ್ಷ ಪ್ರಾಯದ ಯು.ವೆಂಕಟೇಶ ಕಿಣಿ, ಕಳೆದ ಸಾಲಿನಲ್ಲಿ ಉತ್ತಮವಾಗಿ ಕ್ಲಬ್ ಮುನ್ನೆಡೆಸಿ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರಿಂದ ಡೈಮಂಡ್ ಪ್ರಶಸ್ತಿಗೆ ಭಾಜನರಾದ ಕ್ಲಬ್ ನಿರ್ಗಮಿತ ಅಧ್ಯಕ್ಷ ಮೊಹಮ್ಮದ್ ಸಾಹೇಬ್, ನಿರ್ಗಮಿತ ಕಾರ್ಯದರ್ಶಿ ರಾಮಚಂದ್ರರವರುಗಳನ್ನು ಸನ್ಮಾನಿಸಲಾಯಿತು.