ರಸ್ತೆ ಗುಂಡಿ ಮುಚ್ಚಿದ ಯುವಕರು

0

ಉಪ್ಪಿನಂಗಡಿ: ಊರ ಸಮಸ್ಯೆಗಳ ಬಗ್ಗೆ ಅವರಿವರನ್ನು ಕಾರಣರನ್ನಾಗಿಸಿ ನಿಂದಿಸುವವರ ನಡುವೆ ಸಮಸ್ಯೆಯನ್ನು ಪರಿಹರಿಸುವಲ್ಲಿ ನಮ್ಮ ಪಾತ್ರವೇನು ಎಂಬ ಚಿಂತನೆಯಡಿ ಯುವಕರಿಬ್ಬರು ರಸ್ತೆಯ ನಡುವೆ ಅಪಾಯಕಾರಿಯಾಗಿದ್ದ ಗುಂಡಿಯನ್ನು ಮುಚ್ಚಿ ಪರೋಪಕಾರದ ನಡೆಯನ್ನು ಪ್ರದರ್ಶಿಸಿದ್ದಾರೆ.


ಉಪ್ಪಿನಂಗಡಿ – ಕಡಬ ನಡುವಣದ ರಸ್ತೆಯ ಪೆರಿಯಡ್ಕ ಎಂಬಲ್ಲಿ ವಾಹನ ಚಾಲಕರನ್ನು ಕೆಡವುವಂತ ಗುಂಡಿಯೊಂದಿತ್ತು. ಇದನ್ನು ಮುಚ್ಚುವ ಬಗ್ಗೆ ಗಮನ ಹರಿಸಿದ ನೆಡ್ಚಿಲ್‌ನ ನಿಶಾಂತ್ ಮತ್ತವರ ಸ್ನೇಹಿತ ಮುನ್ನಾ ಎಂಬವರು ಸ್ವಯಂಪ್ರೇರಿತರಾಗಿ ಶ್ರಮದಾನ ನಡೆಸಿ ಈ ಗುಂಡಿಯನ್ನು ಮುಚ್ಚಿದರು. ಈ ಮೂಲಕ ತಮ್ಮ ಭಾಗದ ರಸ್ತೆಯನ್ನು ಸುಸ್ಥಿತಿಯಲ್ಲಿರಿಸುವ ಹೊಣೆಗಾರಿಕೆ ತಮ್ಮದೆಂದು ತಮ್ಮ ಕಾರ್ಯದ ಮೂಲಕ ಸಾದರ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here