ಕಡಬ: ಕಡಬ ಸುನ್ನೀ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಸುನ್ನೀ ಯುವಜನ ಸಂಘ ಕರ್ನಾಟಕ ರಾಜ್ಯಾಧ್ಯಕ್ಷ ಬಶೀರ್ ಸಅದಿ ಪೀನ್ಯ ಬೆಂಗಳೂರು, ರಾಜ್ಯ ಇಸಾಬ ಉಪಾಧ್ಯಕ್ಷ ಇಬ್ರಾಹಿಂ ಕಲೀಲ್ ಅಲ್ ಮಾಲಿಕಿ, ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮಾಡಾವು , ಕೋಶಾಧಿಕಾರಿ ಶಾಫಿ ಸಖಾಫಿ ಕೊಕ್ಕಡ, ಸೋಶಿಯಲ್ ಉಪಾಧ್ಯಕ್ಷ ಅಜೀಝ್ ಚೆನ್ನಾರ್ ರವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ವೈ.ಎಸ್ ಕಡಬ ಝೊನ್ ಅಧ್ಯಕ್ಷ ಕೆ.ಎಚ್.ಹಂಝ ಕಳಾರ, ಕೊಶಾಧಿಕಾರಿ ಝಿಯಾರ್ ಕೊಡಿಂಬಾಳ, ಇಸಾಬ ಕಾರ್ಯದರ್ಶಿ ಯೂನುಸ್ ಕಡಬ, ಗಫ್ಫಾರ್ ನೆಲ್ಯಾಡಿ, ಸಿದ್ದೀಕ್ ಕಡಬ, ಕೆ.ಎಂ.ಜೆ ಮುಖಂಡರಾದ ಕೆ.ಇ ಅಬೂಬಕ್ಕರ್, ಉಮ್ಮರ್ ತಾಜ್ ನೆಲ್ಯಾಡಿ, ಎನ್.ಎಸ್ ಸುಲೈಮಾನ್, ಉಮ್ಮರ್ ಮುಸ್ಲಿಯಾರ್ ಮರ್ಧಾಳ, ಅಬ್ಬಾಸ್ ಪಡುಬೆಟ್ಟು, ಕೆ.ಸಿ.ಎಫ್ ನಾಯಕರಾದ ರಿಯಾ ಎನ್.ಕೆ ನೆಲ್ಯಾಡಿ, ಕೆ.ಎಂ ಅಯ್ಯುಬ್ ಮೊರಂಕಾಳ, ಹನೀಫ್ ಝುಂ ಝುಂ ಎಸ್.ವೈ.ಎಸ್ ನಾಯಕರಾದ ಅಶ್ರಫ್ ಮದನಿ ಹೊಸಮಜಲು, ಅಶ್ರಫ್ ಸಿ.ಎಂ, ರಹಿಮಾನ್ ನೆಲ್ಯಾಡಿ, ಸಹಿತ ಹಲವು ನಾಯಕರು ಉಪಸ್ಥಿತರಿದ್ದರು.
ಬಶೀರ್ ಚೆನ್ನಾರ್ ಸ್ವಾಗತಿಸಿ, ಝೊನ್ ಪ್ರಧಾನ ಕಾರ್ಯದರ್ಶಿ ಫಾರೂಕ್ ನೆಲ್ಯಾಡಿ ವಂದಿಸಿದರು.