ನಾಯಕರು ಸಶಕ್ತರಾದಾಗ ದೇಶ ದೃಢವಾಗುತ್ತದೆ- ಬಾಲಚಂದ್ರ ಬಾರ್ತಿಕುಮೇರು
ಪುತ್ತೂರು: ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಶಾಲಾ ನಾಯಕರುಗಳ ಪಾತ್ರ ಬಹಳ ಮುಖ್ಯವಾಗಿದೆ. ನಾಯಕರು ಸಶಕ್ತರಾದಾಗ ಸಂಸ್ಥೆಯಾಗಲಿ ಅಥವಾ ದೇಶವಾಗಲಿ, ದೃಢವಾಗಲು ಸಾಧ್ಯ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಬಾರ್ತಿಕುಮೇರು ಅವರು ಹೇಳಿದರು.

ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸರಕಾರದ ನೂತನ ಮಂತ್ರಿಮಂಡಲದ ಅನುಷ್ಠಾನಾಧಿಕಾರಿಗಳಾಗಿ ಭಾಗವಹಿಸಿ ಮಾತನಾಡಿದರು. ಸುಂದರವಾದ ಸ್ವಚ್ಛವಾದ ವಾತಾವರಣದಲ್ಲಿ ನಿರ್ಮಾಣವಾಗಿರುವ ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ನೀವೇ ಧನ್ಯರು ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಅಧ್ಯಕ್ಷ ವೆಂಕಟರಮಣ ಗೌಡ ಮಾತನಾಡಿ ನಾಯಕತ್ವದ ವಿಧಗಳು ಜವಾಬ್ದಾರಿಗಳ ಕುರಿತು ಕಿವಿಮಾತು ನೀಡಿದರು.
ಶಾಲಾ ಸಂಚಾಲಕ ಎ.ವಿ ನಾರಾಯಣ ಮತ್ತು ಆಡಳಿತ ಅಧಿಕಾರಿ ಗುಡ್ಡಪ್ಪಗೌಡ ಬಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. 2ನೇ ತರಗತಿಯ ಶಿವಾನಿ ಮತ್ತು ತಂಡ ಪ್ರಾರ್ಥಿಸಿದರು. ಶಿಕ್ಷಕಿ ಹಿತಶ್ರೀ ಸ್ವಾಗತಿಸಿದರು. 5ನೇ ತರಗತಿಯ ವಿದ್ಯಾರ್ಥಿ ಅದ್ವಿಕ್ ಬಂಜನ್ ಸಂವಿಧಾನ ಪೀಠಿಕೆಯನ್ನು ವಾಚಿಸಿದರು. ಶಿಕ್ಷಕಿ ಸುಚಿತ ವಿದ್ಯಾರ್ಥಿ ಸರಕಾರ ರಚನೆಯ ಪ್ರಕ್ರಿಯೆಯನ್ನು ವಿವರಿಸಿದರು. ಪ್ರಾಂಶುಪಾಲ ಅಮರನಾಥ ಪಟ್ಟೆ ಪ್ರಮಾಣವಚನ ಬೋಧಿಸಿದರು. ಶಿಕ್ಷಕಿ ಸವಿತಾ ಕುಮಾರಿ ವಿದ್ಯಾರ್ಥಿ ಸರಕಾರದ ಪದಾಧಿಕಾರಿಗಳ ಜವಾಬ್ದಾರಿಯನ್ನು ವಿವರಿಸಿದರು. ಶಿಕ್ಷಕಿ ಶ್ವೇತ ವಂದಿಸಿದರು.
ಶಿಕ್ಷಕಿ ರಾಧಾ ಕಾರ್ಯಕ್ರಮವನ್ನು ನಿರೂಪಿಸಿದರು.
ಶಾಲೆಯಲ್ಲಿ ಕ್ರೀಡೆಯಲ್ಲಿ ಆಸಕ್ತ ಇರುವ ವಿದ್ಯಾರ್ಥಿಗಳು ಇಚ್ಚಿಸಿದ್ದಲ್ಲಿ ಉಚಿತವಾಗಿ ತರಬೇತಿ ನೀಡುತ್ತೇನೆ. ಆಡಳಿತ ಮಂಡಳಿ ಈ ಕುರಿತು ಗಮನಿಸುವಂತೆ ಕ ಬಾಲಚಂದ್ರ ಬಾರ್ತಿಕುಮೇರು ಅವರು ಭರವಸೆ ನೀಡಿದರು.