ನೆಲ್ಯಾಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಗೋಳಿತ್ತೊಟ್ಟು ಇಲ್ಲಿನ 2025-26ನೇ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಸತ್ತು ಚುನಾವಣೆ ನಡೆಯಿತು.

ವಿದ್ಯಾರ್ಥಿಗಳಿಗೆ ಚುನಾವಣೆಯಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿದ್ಯುನ್ಮಾನ ಮತಯಂತ್ರ (ಮೊಬೈಲ್‌ಆಪ್) ಬಳಸಿ ಚುನಾವಣೆಯನ್ನು ನಡೆಸಲಾಯಿತು. ಶಾಲಾ ನಾಯಕ ಸ್ಥಾನಕ್ಕೆ ೮ನೇ ತರಗತಿಯ ಮೊಹಮ್ಮದ್ ರಾಫಿಹ್, ಶರಣ್ಯ, ಶ್ರೀರಕ್ಷಾ ಕೆ.ಜಿ, ಸ್ಪರ್ಧಿಸಿದ್ದು, ಅತ್ಯಂತ ಹೆಚ್ಚು ಮತಗಳನ್ನು ಪಡೆದ ಮೊಹಮ್ಮದ್ ರಾಫಿಹ್ ಶಾಲಾ ಮಂತ್ರಿಮಂಡಲದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಶಾಲಾ ಉಪನಾಯಕನ ಹುದ್ದೆಗೆ 7ನೇ ತರಗತಿಯ ದೀಪ್ತಿ ಸಿ.ಪಿ.ಹಾಗೂ ಫಾತಿಮತ್ ಆರಿಫ ಸ್ಪರ್ಧಿಸಿದ್ದು ಅತ್ಯಂತ ಹೆಚ್ಚು ಮತಗಳಿಸಿದ ಫಾತಿಮತ್‌ಆರಿಫ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಉಳಿದಂತೆ ಸಭಾಪತಿ-ಆರಾಧ್ಯ ಕೆ.8ನೇ, ಶಿಕ್ಷಣಮಂತ್ರಿ-ದೀಪ್ತಿ ಸಿ.ಪಿ.7ನೇ, ಸಾಂಸ್ಕೃತಿಕ ಮಂತ್ರಿ-ಫಾತಿಮತ್ ಸಂಬ್ರೀನಾ 7ನೇ, ಆರೋಗ್ಯ ಮಂತ್ರಿ-ಚಿಂತನ 8ನೇ, ಆಹಾರ ಮಂತ್ರಿ-ಮೋನಿಶ್ 7ನೇ, ಕ್ರೀಡಾಮಂತ್ರಿ-ಶ್ರೇಯಸ್ ಎ.8ನೇ, ರಕ್ಷಣಾ ಮಂತ್ರಿ-ಆದೀಶ್ 6ನೇ, ನೀರಾವರಿ ಮತ್ತು ತೋಟಗಾರಿಕಾ ಮಂತ್ರಿ-ಮೊಹಮ್ಮದ್ ಅಝ್‌ನಾನ್, ವಾರ್ತಾಮಂತ್ರಿ-ಫಾತಿಮತ್ ಸನಾ 7ನೇ, ಸ್ವಚ್ಚತಾ ಮಂತ್ರಿ-ಫಾತಿಮತ್ ಆಶುರಾ 8ನೇ, ಗ್ರಂಥಾಲಯ ಮಂತ್ರಿ-ಹೃತ್ವಿಕ್ ಗೌಡ ಸಿ.ಪಿ 6ನೇ, ಆಯ್ಕೆಯಾದರು. ಶಾಲಾ ಸಂಸತ್ತಿನ ವಿರೋಧ ಪಕ್ಷದ ನಾಯಕಿಯಾಗಿ 6ನೇ ತರಗತಿಯ ಶ್ರೀರಕ್ಷಾ ಕೆ.ಜಿ. ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಶಾಲಾ ಸಂಸತ್ತಿನ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಶಿವಕುಮಾರ್ ಪಿ.ಪಿ, ರವರು ವಿದ್ಯಾರ್ಥಿ ಸಂಸತ್ತಿನ ಜವಾಬ್ದಾರಿ ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿ, ನೂತನ ಸಂಸತ್ತಿಗೆ ಶುಭ ಹಾರೈಸಿದರು.

ನಾಮ ಪತ್ರ ಸಲ್ಲಿಕೆ, ನಾಮ ಪತ್ರ ಹಿಂಪಡೆಯುವಿಕೆ, ಚುನಾವಣಾ ಪ್ರಚಾರ, ಮಾದರಿ ಮತದಾನ ಕೇಂದ್ರ ಹಾಗೂ ಮತದಾನ ಕೇಂದ್ರದ ಅಧಿಕಾರಿಗಳು, ಮತಪತ್ರ ಹಾಗೂ ವಿದ್ಯುನ್ಮಾನ ಮತಯಂತ್ರದ ಬಳಕೆ, ಮತಎಣಿಕೆ ಹಾಗೂ ಫಲಿತಾಂಶ ಘೋಷಣೆ, ಪ್ರಮಾಣ ವಚನ ಸೇರಿದಂತೆ ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ನೈಜ ಚುನಾವಣೆಯ ಅನುಭವವನ್ನು ಪಡೆಯುವುದರೊಂದಿಗೆ ಅನುಭವಾತ್ಮಕ ಕಲಿಕೆಗೆ ಸಾಕ್ಷಿಯಾದರು. ಶಾಲಾ ಸಂಸತ್ತಿನ ಚುನಾವಣೆಯನ್ನು ಶಾಲಾ ಮುಖ್ಯಗುರು ಜಯಂತಿ ಬಿ.ಎಂ. ರವರ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಅಬ್ದುಲ್ ಲತೀಫ್ ಸಿ., ತೇಜಸ್ವಿ ಅಂಬೆಕಲ್ಲು, ಮನ್ವಿತಾ ಡಿ, ಹಾಗೂ ಗೌರವ ಶಿಕ್ಷಕಿಯರಾದ ರಶ್ಮಿತಾ ಹಾಗೂ ಸುಜಯಾರವರ ಸಹಕಾರದೊಂದಿಗೆ ನಡೆಸಲಾಯಿತು.