ಆಲಂಕಾರು: ಕುಂತೂರು ಗ್ರಾಮದ ಕೋಡ್ಲ ಜಾನಕಿ ಎಂಬವರ ತೋಟದಲ್ಲಿ ಜು.6 ರಂದು ಸುರಿದ ವಿಪರೀತ ಮಳೆ ಮತ್ತು ಗಾಳಿಯಿಂದ 70 ಕ್ಕೂ ಹೆಚ್ಚು ಅಡಿಕೆ ಮರಗಳು ಬಿದ್ದು ಹಾನಿಯಾದ ಘಟನೆ ಕುಂತೂರು ಕೋಡ್ಲ ಎಂಬಲ್ಲಿ ನಡೆದಿದೆ.
ಗಾಳಿಯ ಪರಿಣಾಮ ಇದರ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಹಾನಿಯಾಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರ ಗಮನಕ್ಕೆ ಕೃಷಿಕರು ತಂದಿದ್ದಾರೆ ಎಂದು ವರದಿಯಾಗಿದೆ