ಪುತ್ತೂರು: ಇತ್ತೀಚೆಗಷ್ಟೆ ನಗರಸಭೆ ಮುಖ್ಯರಸ್ತೆ ಹೊಂಡಗಳಿಗೆ ಹಾಕಿದ ಡಾಮಾರು ತೇಪೆ ಕಿತ್ತು ಹೋಗಿದ್ದು, ಇದೀಗ ಇಂಟರ್ಲಾಕ್ ಮೂಲಕ ತೇಪೆ ಕಾರ್ಯಕ್ಕೆ ನಗರಸಭೆ ಮುಂದಾಗಿದ್ದು, ಜು.9ರಂದು ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಪುತ್ತೂರು ನಗರಸಭೆಯ ದರ್ಬೆ ವೃತ್ತದಲ್ಲಿ ಹಾಗು ಮುಖ್ಯರಸ್ತೆಯ ಧನ್ವಂತರಿ ಆಸ್ಪತ್ರೆಯ ಬಳಿ ಹೊಂಡಗಳಿಗೆ ಇಂಟರ್ಲಾಕ್ ಅಳವಡಿಸಿ ತೇಪೆ ಕಾರ್ಯ ನಡೆಯಲಿದೆ.
ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸದಸ್ಯ ಯೂಸೂಪ್ ಡ್ರೀಮ್, ಪೌರಾಯುಕ್ತ ಮಧು ಎಸ್ ಮನೋಹರ್, ಇಂಜಿನಿಯರ್ ಕೃಷ್ಣಮೂರ್ತಿ ರೆಡ್ಡಿ ಪೇಟೆಯ ಹಲವು ಕಡೆ ಹೊಂಡ ಬಿದ್ದ ರಸ್ತೆಗಳನ್ನು ಪರಿಶೀಲನೆ ಮಾಡಿದರು.