ಹಿರೇಬಂಡಾಡಿ: ಪತ್ರಿಕಾ ವಿತರಕ ಹಾಗೂ ಸುದ್ದಿಬಿಡುಗಡೆ ಪತ್ರಿಕೆಯ ಪ್ರತಿನಿಧಿಯಾಗಿರುವ ರೋಹಿತ್ ಸರೋಳಿ ಅವರನ್ನು ಜು.9ರಂದು ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರೋಹಿತ್ ಕಳೆದ ನಾಲ್ಕು ವರ್ಷಗಳಿಂದ ಸುದ್ದಿ ಬಿಡುಗಡೆ ಹಾಗೂ ಉದಯವಾಣಿ ದಿನ ಪತ್ರಿಕೆಗಳನ್ನು ಉಚಿತವಾಗಿ ಶಾಲೆಗೆ ನೀಡಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಲ್ಲಿಸಿದ ಕಿಂಚಿತ್ ಸೇವೆಯನ್ನು ಪರಿಗಣಿಸಿ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಆಂಗ್ಲ ಭಾಷೆ ಶಿಕ್ಷಕ ವಸಂತಕುಮಾರ್ ಸನ್ಮಾನಿತರನ್ನು ಪರಿಚಯಿಸಿದರು. ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.