ನಿಡ್ಪಳ್ಳಿ: ನಿಡ್ಪಳ್ಳಿ ಬಿ.ಜೆ.ಪಿ ಶಕ್ತಿ ಕೇಂದ್ರದ ವತಿಯಿಂದ ಗುರು ಪೂರ್ಣಿಮೆ ಪ್ರಯುಕ್ತ ಗುರು ವಂದನಾ ಕಾರ್ಯಕ್ರಮ ಜು.10ರಂದು ನಡೆಯಿತು.
ಗ್ರಾಮದ ಮೂರು ವಾರ್ಡ್ ನಲ್ಲಿ ಹಿರಿಯರಾದ ಮಹಾಲಿಂಗ ಮಣಿಯಾಣಿ ಬೊಳುಂಬುಡೆ, ಶ್ರೀನಿವಾಸ ಭಟ್ ವಾಲ್ತಾಜೆ ಹಾಗೂ ದಿವಾಕರ ರಾವ್ ಬ್ರಹ್ಮರಗುಂಡ ಇವರನ್ನು ಅವರ ಮನೆಗೆ ತೆರಳಿ ಗುರು ವಂದನೆ ಸಲ್ಲಿಸಲಾಯಿತು.

ಬಿ.ಜೆ.ಪಿ ಹಿಂದುಳಿದ ವರ್ಗಗಳ ಯುವ ಮೊರ್ಚಾದ ರಾಜ್ಯ ಕಾರ್ಯದರ್ಶಿ ಅರ್.ಸಿ.ನಾರಾಯಣ ರೆಂಜ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ನಿರ್ದೇಶಕ ನಾಗೇಶ ಗೌಡ ಪುಳಿತ್ತಡಿ, ನಿಡ್ಪಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಕುಮಾರ್ ಬೇರಿಕೆ, ಬಿ.ಜೆ.ಪಿ ಒಂದನೇ ವಾರ್ಡ್ ಅಧ್ಯಕ್ಷ ರೋಹಿತ್ ಪಟ್ಟೆ, ಕಾರ್ಯದರ್ಶಿ ಪದ್ಮನಾಭ ಕುಲಾಲ್ ಗುರಿ, ಎರಡನೇ ವಾರ್ಡ್ ಅಧ್ಯಕ್ಷ ಕೆ.ಎನ್.ಪಾಟಾಳಿ ಕೋನಡ್ಕ,ಸುಧಾಕರ ಭಟ್ ಬಂಟಾಜೆ, ಪ್ರಭಾಕರ ಭಟ್ ಬಂಟಾಜೆ ಉಪಸ್ಥಿತರಿದ್ದರು.