ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು, ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆಯ ಆಚರಣೆಯು ಇತ್ತೀಚೆಗೆ ನಡೆಯಿತು.


ವ್ಯಾಸಮಹರ್ಷಿಗಳ ಜನ್ಮದಿನವನ್ನು ಸಾಂಕೇತಿಕವಾಗಿ ಸಂಸ್ಥೆಯ ಮಾರ್ಗದರ್ಶಕರಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಆಚರಿಸಲಾಯಿತು. ಗುರುಪೂರ್ಣಿಮೆಯ ಮಹತ್ವವನ್ನು ಕಾಲೇಜಿನ ಕನ್ನಡ ಉಪನ್ಯಾಸಕ ಚೇತನ್ ಆನೆಗುಂಡಿಯವರು ವಿದ್ಯಾರ್ಥಿಗಳಿಗೆ ತಿಳಿಸಿ, “ಅಂಧಕಾರವನ್ನು ದೂರಮಾಡಿ, ಜ್ಞಾನದ ಬೆಳಕನ್ನು ನೀಡುವ ಸೂರ್ಯನೇ ಗುರು. ‘ಗು’ ಎಂದರೆ ಅಜ್ಞಾನ. ‘ರು’ ಎಂದರೆ ಹೋಗಲಾಡಿಸುವುದು ಎಂಬ ಅರ್ಥ ಇದೆ. ನಮ್ಮ ಜೀವನಕ್ಕೆ ಮಾರ್ಗದರ್ಶನವನ್ನು ಮಾಡುವ ಗುರುವನ್ನು ನೆನಪಿಸುವುದು ಪ್ರತಿ ವಿದ್ಯಾರ್ಥಿಯ ಕರ್ತವ್ಯ. ಹಾಗಾಗಿ ಈ ದಿನದಂದು ನಮಗೆ ಮಾರ್ಗದರ್ಶನ ಮಾಡಿದ ಪ್ರತಿಯೊಬ್ಬ ಗುರುಗಳನ್ನು ಸ್ಮರಿಸಿಕೊಳ್ಳೋಣ” ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಎಲ್ಲಾ ಅಧ್ಯಾಪಕರು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ ಇವರು ಸ್ವಾಗತಿಸಿದರು. ಪ್ರೌಢಶಾಲೆಯ ಹಿರಿಯ ಅಧ್ಯಾಪಕ ವೆಂಕಟೇಶ ದಾಮ್ಲೆ ವಂದಿಸಿದರು.