ರಾಮಕುಂಜ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಕ್ಕೆ ನೂತನವಾಗಿ ನಿರ್ಮಾಣವಾಗಲಿರುವ ಧ್ವಜಸ್ತಂಭಕ್ಕೆ ಮರವನ್ನು ದಾನವಾಗಿ ನೀಡಿದ ಪಾತಾಳ ವೆಂಕಟ್ರಮಣ ಭಟ್ ಮತ್ತು ಅವರ ಪುತ್ರರಾದ ಅಂಬಾ ಪ್ರಸಾದ್ ಪಾತಾಳ, ಶ್ರೀರಾಮ ಪಾತಾಳ ಅವರಿಗೆ ಆತೂರು ದೇವಸ್ಥಾನದ ವತಿಯಿಂದ ಪಾತಾಳ ಮನೆಯಲ್ಲಿ ಗೌರವಾರ್ಪಣೆ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್ ರವರು ಅಭಿನಂದಿಸಿ ಮಾತನಾಡಿ, ಶ್ರೀ ಸಹಸ್ರಲಿಂಗೇಶ್ವರ ಮತ್ತು ಶ್ರೀ ಸದಾಶಿವ ಮಹಾಗಣಪತಿ ದೇವರ ಯೋಗ ಮತ್ತು ಭಾಗ್ಯದಿಂದ ವೆಂಕಟ್ರಮಣ ಭಟ್ ಮತ್ತು ಮಕ್ಕಳಿಗೆ ಈಗ ಭಾಗ್ಯ ಲಭಿಸಿದೆ. ಊರಿನ ಭಕ್ತರು ನೆನಿಸಿದಂತೆ ಕೊಡಿಮರ ಮತ್ತು ಜೀರ್ಣೋದ್ದಾರ ಕೆಲಸಗಳು ನಿರಾತಂಕವಾಗಿ ನಡೆಯಲಿ ಎಂದು ಹೇಳಿ ಶುಭಹಾರೈಸಿದರು.

ಇನ್ನೋರ್ವ ಅತಿಥಿ ಉಪ್ಪಿನಂಗಡಿಯ ದಂತ ವೈದ್ಯ ಡಾ.ರಾಜಾರಾಂ ಕೆ.ಬಿ.ಅವರು ಪಾತಾಳ ಕುಟುಂಬಸ್ಥರಿಗೆ ಶುಭಹಾರೈಸಿ, ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು. ಹಿರೇಬಂಡಾಡಿ ಉಳತ್ತೋಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಶಾಂತಿತ್ತಡ್ಡ ಶುಭಹಾರೈಸಿದರು.
ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ಕುಮಾರ್ ರೈ ಅರುವಾರ ಬಾಳಿಕೆ, ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ಸಮಿತಿ ಸದಸ್ಯರಾದ ಸುನೀತ್ರಾಜ್ ಶೆಟ್ಟಿ, ಯತೀಶ್ ಗುಂಡಿಜೆ, ಸಂಜೀವ ಸುದೆಂಗಳ, ಗೋಪಾಲ ನಾಯ್ಕ್ ಸಿಗೆತ್ತಡಿ, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಸುಜಾತ ಜೆ.ಶೆಟ್ಟಿ ಬಡಿಲ, ಮೀನಾಕ್ಷಿ ಕೆ.ಮುಂಡೈಮಾರು, ಉತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಕೊರಿಕ್ಕಾರು, ಉಪಾಧ್ಯಕ್ಷ ಮೋಹನದಾಸ್ ಶೆಟ್ಟಿ ಶೆಟ್ಟಿ ಬಡಿಲ, ನ್ಯಾಯವಾದಿ ರವಿಕಿರಣ್, ಪ್ರಮುಖರಾದ ರಾಜೀವ ಸುದೆಂಗಳ, ಸಂಜೀವ ಗೌಡ ಪರಂಗಾಜೆ, ಅಶ್ವಿನ್ ಅಂಬಾ, ಸಂಜೀವ ಗೌಡ ಪಲ್ಲಡ್ಕ, ಹೇಮಾಮೋಹನದಾಸ್ ಶೆಟ್ಟಿ, ಕೊರಗಪ್ಪ ಗೌಡ, ಎಂ.ಜಯರಾಮ ಶೆಟ್ಟಿ ಬಡಿಲ ಮತ್ತು ಪಾತಾಳ ಕುಟುಂಬಸ್ಥರು ಉಪಸ್ಥಿತರಿದ್ದರು.