ನೆಲ್ಯಾಡಿ: ಶಿಕ್ಷಣ ಇಲಾಖೆ ಹಾಗೂ ಕೌಕ್ರಾಡಿ ಗ್ರಾ.ಪಂ.ನ ಉದ್ಯೋಗ ಖಾತ್ರಿ ಯೋಜನೆ ಅನುದಾನದಲ್ಲಿ ಹೊಸಮಜಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಿರ್ಮಾಣಗೊಂಡ ಶೌಚಾಲಯದ ಉದ್ಘಾಟನೆ ಜು.12ರಂದು ನಡೆಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಉದಯಕುಮಾರ್, ಸದಸ್ಯರಾದ ಲೋಕೇಶ್ ಬಾಣಜಾಲು, ಮಹೇಶ್ ಪಟ್ಲಡ್ಕ, ಜನಾರ್ದನ, ಪಿಡಿಒ ದೇವಿಕಾ, ಗುತ್ತಿಗೆದಾರ ವಿನೋದ್ ಪಿ.ಎ.ಇಚ್ಲಂಪಾಡಿ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಬಾಣಜಾಲು, ಉಪಾಧ್ಯಕ್ಷ ಅಝೀಝ್, ಮುಖ್ಯಗುರು ಪ್ರೇಮಾ, ಪ್ರಮುಖರಾದ ಅಣ್ಣಿ ಎಲ್ತಿಮಾರ್, ಬಾಬು ಪೂಜಾರಿ ಗೋಳಿತ್ತೊಟ್ಟು, ಹೊನ್ನಪ್ಪ ದೋಂತಿಲ, ವಿಶ್ವನಾಥ ಮೊಬೈಲ್ ಮ್ಯಾಟ್ಸಿಕ್ಸ್, ಶಾಲಾ ಎಸ್‌ಡಿಎಂಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
