ಪುತ್ತೂರು: ತುಳುನಾಡಿನಲ್ಲಿ ಆಟಿ ತಿಂಗಳು ಪ್ರಾರಂಭವಾಗಿದ್ದು, ಎಲ್ಲೆಡೆ ಆಟಿದ ಗಮ್ಮತ್ ಆರಂಭವಾಗಿದೆ. ಆಟಿ ಪ್ರಯುಕ್ತ ಪಾಲೆದ ಕಷಾಯ ಸೇವಿಸುವುದು ವಾಡಿಕೆ. ಮನೆಮನೆಗಳಲ್ಲೂ ಪತ್ರೊಡೆ ಸವಿಯುತ್ತಿದ್ದಾರೆ. ಆದರೆ, ತನ್ನ ಗ್ರಾಹಕರಿಗೆ ಆಟಿ ಗಮ್ಮತ್ ಉಣಬಡಿಸುವ ಸಂಸ್ಥೆಗಳು ಅತಿ ವಿರಳ. ಆದರೆ ಪುತ್ತೂರಿನ ಪ್ರಸಿದ್ಧ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ತನ್ನ ಗ್ರಾಹಕರೊಂದಿಗೆ ಈ ವಿನೂತನ ಆಚರಣೆಯನ್ನು ಆಚರಿಸಿಕೊಂಡಿದೆ.
ಆಟಿ ತಿಂಗಳ ಪ್ರಯುಕ್ತ ಜು.26 ರಂದು ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಗ್ರಾಹಕರಿಗೆ ಹಾಗೂ ಸಿಬ್ಬಂದಿಗಳಿಗೆ ಪತ್ರೊಡೆ, ಗೇನಸಾಲೆ ಹಾಗೂ ಕಷಾಯ ನೀಡಲಾಯಿತು.
