ಪುತ್ತೂರು:ಈಶ್ವರಮಂಗಲ ಅಮರಗಿರಿ ಶ್ರೀ ಭಾರತಿ ಅಮರ ಜ್ಯೋತಿ ಮಂದಿರದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಜು.26ರಂದು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ವಾಯು ಸೇನೆಯ ನಿವೃತ್ತ ಸಾರ್ಜೆಂಟ್ ಸುರೇಶ್ ಕೆಯು ಹಾಗೂ ಪ್ರಗತಿಪರ ಕೃಷಿಕ ರವಿಕಿರಣ ಶೆಟ್ಟಿ ಬೆದ್ರಾಡಿ ಭಾಗವಹಿಸಿದ್ದರು. ಕಾರ್ಗಿಲ್ ವಿಜಯೋತ್ಸವದ ಗೌರಾರ್ಪಣೆಯಾಗಿ ಪ್ರಸನ್ನ ಬಿ ಹಾಗೂ ಲಕ್ಷ್ಮೀಶ ಕಡಮಜಲು ಇವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ವಹಿಸಿದ್ದರು. ಕ್ಷೇತ್ರದ ಧರ್ಮದರ್ಶಿ ಶಿವರಾಂ ಪಿ ಸ್ವಾಗತಿಸಿ, ಪ್ರವೀಣ ನೀರಳಿಕೆ ವಂದಿಸಿದರು. ಸುಬ್ಬ ಪಾಟಾಳಿ ಪಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಶಿವರಾಂ ಶರ್ಮ ,ಗಜಾನನ ಶಾಲಾ ವಿದ್ಯಾರ್ಥಿಗಳು ಹಾಗೂ ದೇಶಭಕ್ತರು ಉಪಸ್ಥಿತರಿದ್ದರು.
