ಪುತ್ತೂರು: ಗೇರು ಮರವೊಂದು ಮನೆ ಮೇಲೆ ಮುರಿದು ಬಿದ್ದ ಪರಿಣಾಮ ಮನೆ ಜಖಂಗೊಂಡು ಅಪಾರ ನಷ್ಟ ಸಂಭವಿಸಿದ ಘಟನೆ ಜು.26ರಂದು ಒಳಮೊಗ್ರು ಗ್ರಾಮದ ಕಲ್ಲಡ್ಕ ಎಂಬಲ್ಲಿ ನಡೆದಿದೆ. ಕಲ್ಲಡ್ಕ ತಿಮ್ಮಪ್ಪ ರೈಯವರ ಹಂಚಿನ ಮನೆಗೆ ಜು.26ರಂದು ಸಂಜೆ ಬೀಸಿದ ಗಾಳಿಗೆ ಮನೆ ಸಮೀಪವಿದ್ದ ಗೇರು ಮರ ಮುರಿದು ಬಿದ್ದಿದೆ. ಇದರಿಂದ ಮನೆಯ ಒಂದು ಭಾಗದ ಹಂಚು ಸಂಪೂರ್ಣ ಹುಡಿಯಾಗಿದೆ. ಪಕ್ಕಾಸುಗಳು ಮುರಿದಿದೆ ಎಂದು ತಿಳಿದುಬಂದಿದೆ. ಮರ ಬೀಳುವ ಸಂದರ್ಭದಲ್ಲಿ ಮನೆಯಲ್ಲಿ ಜನರಿದ್ದರು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಸ್ಥಳೀಯರಾದ ಪ್ರವೀಣ್ ಪಲ್ಲತ್ತಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
