ಪುತ್ತೂರು: ಎಸ್‌ಡಿಪಿಐ ಕೊಡಿಪ್ಪಾಡಿ ಬ್ರಾಂಚ್ ಸಮಿತಿ ವತಿಯಿಂದ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವು ಕೊಡಿಪ್ಪಾಡಿಯಲ್ಲಿ ನಡೆಯಿತು.
ಎಸ್‌ಡಿಪಿಐ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ 20 ಮಂದಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು ರವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭ ಪ್ರಸಕ್ತ ರಾಜಕೀಯ ಸನ್ನೀವೇಶ ಮತ್ತು ಪಕ್ಷದ ತತ್ವ ಸಿದ್ದಾಂತದ ಕುರಿತು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವುರವರು ಮಾಹಿತಿ ನೀಡಿದರು. ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಸಿರಾಜ್ ಕೂರ್ನಡ್ಕ, ಕಬಕ ಬ್ಲಾಕ್ ಉಪಾಧ್ಯಕ್ಷ ಅದ್ದು ಕೊಡಿಪ್ಪಾಡಿ, ಕೊಡಿಪ್ಪಾಡಿ ಬ್ರಾಂಚ್ ಅಧ್ಯಕ್ಷ ಫಾರೂಕ್ ಅರ್ಕ ಹಾಗೂ ಕೊಡಿಪ್ಪಾಡಿ ಬ್ರಾಂಚ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶರೀಫ್ ಆನಾಜೆ ಸ್ವಾಗತಿಸಿ, ಹಫೀಝ್ ಆನಾಜೆ ವಂದಿಸಿದರು. ಇಬ್ರಾಹಿಂ ಆನಾಜೆ ಕಾರ್ಯಕ್ರಮವನ್ನು ನಿರೂಪಿಸಿದರು.
