ಉಪ್ಪಿನಂಗಡಿ: ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತರ ಕೊಡುಗೆ ಸಲ್ಲಿಸುವ ಮೂಲಕ ವೈದ್ಯ ಕೆ. ಶೀನಪ್ಪ ಶೆಟ್ಟಿಯವರು ಸಮಾಜಕ್ಕೆ ಮಾದರಿಯಾದ ಜೀವನ ನಡೆಸಿದ್ದಾರೆ ಎಂದು ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಸುಧಾಕರ ಶೆಟ್ಟಿ ತಿಳಿಸಿದರು.

ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಇಲ್ಲಿನ ಕಾಳಿಕಾಂಬಾ ಭಜನಾ ಮಂಡಳಿಯ ಆಶ್ರಯದಲ್ಲಿ ನಡೆದ ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷ, ಇತ್ತೀಚೆಗೆ ನಿಧನರಾದ ಆಯುರ್ವೇದ ಪಂಡಿತ ವೈದ್ಯ ಕೆ. ಶೀನಪ್ಪ ಶೆಟ್ಟಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯು. ಯತೀಶ್ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಹಿರಿಯ ಭಜಕ ಬಾಲಕೃಷ್ಣ ರೈ , ಮಾಜಿ ಅಧ್ಯಕ್ಷ ಉದಯ ಕುಮಾರ್, ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಾಧವ ಆಚಾರ್ಯ , ಪೂರ್ವಾಧ್ಯಕ್ಷರಾದ ಕೆ. ಜಗದೀಶ್ ಶೆಟ್ಟಿ, ಎನ್. ಹರೀಶ್ ನಾಯಕ್, ಐ ಚಿದಾನಂದ ನಾಯಕ್, ಅಶೋಕ್ ಕುಮಾರ್ ರೈ, ಜಯಂತ ಪೊರೋಳಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಡಾ. ಯತೀಶ್ ಕುಮಾರ್ ಶೆಟ್ಟಿ, ಎನ್. ಗೋಪಾಲ ಹೆಗ್ಡೆ, ಐ. ಜಯಂತ ನಾಯಕ್, ಸುಂದರ ಆದರ್ಶನಗರ , ಗಂಗಾಧರ ಟೈಲರ್, ಚಂದ್ರಹಾಸ್ ಹೆಗ್ಡೆ, ಯು. ಕೃಷ್ಣ , ಐ. ಸುಧಾಕರ ನಾಯಕ್, ಶಶಿಧರ್ ಶೆಟ್ಟಿ, ಐ. ಪುಷ್ಪಾಕರ್ ನಾಯಕ್, ಸೂರಜ್ ಹೆಗ್ಡೆ, ಕೃಷ್ಣಪ್ರಸಾದ್ ದೇವಾಡಿಗ, ಸುಶ್ರೂತ್ ಬಿ. ರೈ, ಕೀರ್ತನ್ ಕುಮಾರ್ , ರಾಧಾಕೃಷ್ಣ ಬೊಳ್ಳಾವು, ಸುಜಯ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.