ಇಎಂಐ ಸೌಲಭ್ಯದೊಂದಿಗೆ ಆಗಸ್ಟ್ 15ರವರೆಗೆ ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್’ನಲ್ಲಿ ಜನರೇಟರ್ ಮೇಳ
ಪುತ್ತೂರು: ಇಲ್ಲಿನ ಕೊಂಬೆಟ್ಟು ಜಿ.ಎಲ್ ಟ್ರೇಡ್ ಸೆಂಟರಿನಲ್ಲಿ ಕಾರ್ಯಾಚರಿಸುತ್ತಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್’ನಲ್ಲಿ ನಡೆಯುತ್ತಿರುವ ಜನರೇಟರ್’ಗಳ ಮಾಹಿತಿ, ಪ್ರದರ್ಶನ, ಮಾರಾಟ ಆಗಸ್ಟ್ 15ರವರೆಗೆ ವಿಸ್ತರಿಸಲಾಗಿದೆ.
ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಮೆರ್ ಎನ್.ಎಸ್.ಎಂ. ಇಂಡಿಯಾ ಪ್ರೈ ಲಿ. ಸಂಸ್ಥೆ ಜನರೇಟರ್’ಗಳ ಮಾಹಿತಿ, ಪ್ರದರ್ಶನ, ಮಾರಾಟದ ದಿನವನ್ನು ವಿಸ್ತರಿಸಲು ಉತ್ಸುಕವಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 15ರವರೆಗೆ ಜನರೇಟರ್ ಮಾಹಿತಿ, ಪ್ರದರ್ಶನ, ಮಾರಾಟ ನಡೆಯಲಿದೆ. ಇಎಂಐ ಸೌಲಭ್ಯವೂ ಇದೀಗ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರವಾಗಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವ ದೃಷ್ಟಿಕೋನದಿಂದ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುವಂತಹ ಜನರೇಟರ್’ಗಳನ್ನು ಇಲ್ಲಿ ಕಾಣಲು ಸಾಧ್ಯ. ಪ್ರಮುಖವಾಗಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕರಾವಳಿ ಭಾಗದ ಕೃಷಿ ಚಟುವಟಿಕೆ ಸೊರಗುತ್ತಿರುವ ಕೆಲ ಉದಾಹರಣೆಯೂ ನಮ್ಮ ಮುಂದೆ ಬರುತ್ತದೆ. ಇದಕ್ಕೆ ಪರಿಹಾರದ ರೂಪದಲ್ಲಿ ಜನರೇಟರ್’ಗಳನ್ನು ಅನ್ವೇಷಿಸಿದ್ದು, ಕೃಷಿಕರ ಮುಂದೆ ಬರಲಿದೆ. ಇದಲ್ಲದೇ ಕನ್’ಸ್ಟ್ರಕ್ಷನ್ / ಫ್ಯಾಬ್ರಿಕೇಷನ್ / ಎಲೆಕ್ಟ್ರಿಕಲ್ ವೆಲ್ಡಿಂಗ್ ಕೆಲಸಗಳಿಗಾಗಿ, ಅಂಗಡಿ – ಮಳಿಗೆಗಳಿಗಾಗಿ, ದಿನಬಳಕೆ ಹಾಗೂ ಕೈಗಾರಿಕೆಗಳಿಗಾಗಿ ವಿವಿಧ ವಿನ್ಯಾಸದ ಜನರೇಟರ್’ಗಳು ಲಭ್ಯವಾಗಲಿದೆ.
ಹೋಂಡಾ ಎಂಜಿನ್ ಹೊಂದಿರುವ ಈ ಜನರೇಟರ್’ಗಳು ಅತ್ಯುತ್ತಮ ಗುಣಮಟ್ಟ, ದೀರ್ಘ ಬಾಳಿಕೆ, ಪವರ್ ಬ್ಯಾಕಪ್, 1 ವರ್ಷದ ವ್ಯಾರಂಟಿ, ಕಡಿಮೆ ಬೆಲೆ ನಮ್ಮೂರಿನಲ್ಲೇ ಲಭ್ಯವಾಗಲಿದೆ ಎನ್ನುವುದು ಇಲ್ಲಿನ ವಿಶೇಷತೆ.