ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ : ಸಂತ್ರಸ್ತೆ ಮನೆಗೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷರು, ಯತಿಗಳ ಭೇಟಿ

0

ಆ ಕುಟುಂಬದ ಜೊತೆ ಮಾತನಾಡುವ ಅವಕಾಶ ನನಗೆ ಮಾಡಿ ಕೊಡಿ – ಕೆ.ಪಿ ನಂಜುಂಡಿ

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗಕ್ಕಿಂತ ಮಾತುಕತೆಯ ಮೂಲಕ ಸಂತ್ರಸ್ತೆಗೆ ನ್ಯಾಯ ಒದಗಿಸುವುದು ಸೂಕ್ತವೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ ನಂಜುಂಡಿಯವರು ಮತ್ತೊಮ್ಮೆ ಪುತ್ತೂರಿಗೆ ಆಗಮಿಸಿದ್ದು, ಅವರ ಜೊತೆ ಮೂವರು ಯತಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಅಶೀರ್ವದಿಸಿದರು. ಇದಕ್ಕೂ ಮುಂದೆ ರಾಜ್ಯಾಧ್ಯಕ್ಷರು, ಬಿಜೆಪಿ ಜಿಲ್ಲಾಧ್ಯಕ್ಷರನ್ನು ಭೇಟಿ ಮಾಡಿದ್ದಾರೆ.

ವಿಶ್ವಕರ್ಮ ಸಮಾಜದ ಗುಲ್ಬರ್ಗ ವಿಶ್ವಕರ್ಮ ಮಠ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಕಲಬುರ್ಗಿ ಮೂರು ಜಾವದೀಶ್ವರ ಮಠ ಶ್ರೀ ಪ್ರಣವ ನಿರಂಜನ ಸ್ವಾಮೀಜಿ, ಕೊಪ್ಪಳದ ಸರಸ್ವತಿ ಅಮ್ಮನವರ ಆಸ್ಥಾನ ಶ್ರೀ ಗಣೇಶ್ವರ ಮಹಾಸ್ವಾಮೀಜಿ ಸಂತ್ರಸ್ತೆಗೆ ಹಾಗೂ ಮಗುವನ್ನು ಆಶೀರ್ವದಿಸಿದರು.


ಆ ಕುಟುಂಬದ ಜೊತೆ ಮಾತನಾಡುವ ಅವಕಾಶ ನನಗೆ ಮಾಡಿ ಕೊಡಿ
ಕೆ ಪಿ ನಂಜುಂಡಿಯವರು ಮಾದ್ಯಮದ ಜೊತೆ ಮಾತನಾಡಿ ಸಂತ್ರೆಸ್ತೆಗೆ ನ್ಯಾಯ ಸಿಗಬೇಕು. ಆ ಹುಡುಗನ ಕುಟುಂಬದ ಜೊತೆ ಮಾತನಾಡಲು ನನಗೆ ಅವಕಾಶ ಮಾಡಿಕೊಡಲಿ. ಅದಕ್ಕಾಗಿ ನಾನು ಕೆಲವು ಪ್ರಮುಖರಲ್ಲಿ ಮಾತನಾಡಲು ಬಂದಿದ್ದೇನೆ. ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರೊಂದಿಗೆ ಮಾತನಾಡಿದ್ದೇನೆ. ಇನ್ನು ಡಾ.ಪ್ರಭಾಕರ ಭಟ್ ಕಲ್ಲಡ್ಕ ಹಾಗು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಜೊತೆ ಮಾತನಾಡಲು ಇದೆ. ಆ‌ ಮೂಲಕ ನಾನು ಹುಡುಗನ ಕುಟುಂಬದವರೊಂದಿಗೆ ಮಾತನಾಡಿ ರಾಜಿ ಸಂದಾನದ ಮಾತುಕತೆ ನಡೆಸಿ ಹುಡುಗ ಮತ್ತು ಹುಡುಗಿ ಪೂರ್ಣ ಜೀವನ ನಡೆಸುವಂತಾಗಲಿ. ಮಗುವಿಗೆ ತಂದೆ ಸಿಗಲಿ ಎಂಬ ಆಶಯ. ಹುಡುಗನ ತಂದೆ ತಾಯಿಗೆ ಮತ್ತೊಮ್ಮೆ ಮನವಿ ಮಾಡುವುದು ಇಷ್ಟೆ. ಸಾಧಿಸುವುದು ಏನೂ ಇಲ್ಲ. ಬದುಕು ಕಷ್ಟ ಆಗಬಹುದು‌. ಯಾವ ಕಾರಣಕ್ಕೂ ನ್ಯಾಯಾಂಗ ಅದರದ್ದೇ ಆದ ಕೆಲಸ ಮಾಡಲು ಆರಂಭಿಸಿದರೆ ತುಂಬಾ ವರ್ಷಗಳ ಕಾಲ ಹುಡುಗ ಸೆರೆಮನೆ ವಾಸ ಮಾಡಬೇಕಾಗುತ್ತದೆ. ಇದೆಲ್ಲ ಬೇಡ. ಏನು ನಡೆದಿಯೋ ಅವೆಲ್ಲವನ್ನು ಮರೆತು ಎಲ್ಲೋ ಒಂದು ಕಡೆ ನನಗೆ ಮಾತನಾಡಲು ಅವಕಾಶ ಕೊಟ್ಟರೆ ನಾನೆ ಬಂದು ಮಾತನಾಡುತ್ತೇನೆ. ನಾನು ಅದಕ್ಕಾಗಿ ಕಾಯುತ್ತಿದ್ದೇನೆ. ಕಾನೂನು ಮೇಲೆ ವಿಶ್ವಾಸವಿದೆ. ಅದಕ್ಕಿಂತಲೂ ಹುಡುಗನ ತಂದೆ ತಾಯಿ ಮೇಲೆ ಅದಕ್ಕಿಂತ ಹೆಚ್ಚು ವಿಶ್ವಾಸವಿದೆ. ನಾವೆಲ್ಲ ಒಂದು ಆಗಬೇಕು. ಅವರಲ್ಲಿ ನೇರವಾಗಿ ಮಾತನಾಡಲು ಹೋಗಲು ನಮಗೆ ಕಷ್ಟ ಆಗಬಹುದು ಎಂದು ಪ್ರಭಾಕರ ಭಟ್ ಸಾಹೇಬರಲ್ಲಿ ನಮಗೆ ವೇದಿಕೆ ಮಾಡಿ ಕೊಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಹುಡುಗನ ಮನೆಯವರು ಮಾತನಾಡಲು ಒಪ್ಪಿಕೊಂಡರೆ ನಾಳೆ ನಾಳಿದ್ದು ಬಂದು ಸಮಸ್ಯೆಯನ್ನು‌ ಮುಗಿಸಲು ಏನು ಮಾಡಬೇಕೋ ಆ ಪ್ರಯತ್ನ ಮಾಡುತ್ತೇನೆ. ದಯಮಾಡಿ ಹಠ ಬೇಡ. ಮಕ್ಕಳ ಭವಿಷ್ಯ ನೋಡಬೇಕಾಗಿದೆ. ಮಗುವಿನ‌ ಮುಖ ಒಮ್ಮೆ ನೋಡಿದರೆ ಮನಸು ಬದಲಾಗಬಹುದು ಎಂದರು.

ಈ ಸಂದರ್ಭ ವಿಶ್ವಕರ್ಮ ಸಮಾಜದ ಮುಖಂಡರು ಜೊತೆಗಿದ್ದರು.

LEAVE A REPLY

Please enter your comment!
Please enter your name here