ಬಡಗನ್ನೂರು ಗ್ರಾ. ಪಂ ಸಾಮಾನ್ಯ ಸಭೆ

0

ಬಡಗನ್ನೂರು : ಪುತ್ತೂರು – ಕಾಸರಗೋಡು ಸರಕಾರಿ ಬಸ್ ಪುನಃ ಆರಂಭಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲು ಬಡಗನ್ನೂರು ಗ್ರಾ. ಪಂ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಲಾಯಿತು.

ಸಭೆಯು ಗ್ರಾ. ಪಂ ಉಪಾಧ್ಯಕ್ಷೆ ಸುಶೀಲ ಪಕ್ಯೊಡ್ ರವರ ಅಧ್ಯಕ್ಷತೆಯಲ್ಲಿ ಜು. 31 ರಂದು ಗ್ರಾ. ಪಂ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು – ಕಾಸರಗೋಡು ಸರಕಾರಿ ಬಸ್ ಕಳೆದ ಮೂರು ಹಿಂದೆ ಓಡಾಡುತ್ತಿತ್ತು. ಆನಂತರ ರಸ್ತೆ ಹೊಂಡ ಬಿದ್ದು ಸಂಚಾರಕ್ಕೆ ಕಷ್ಟಕರ ಎಂಬ ನೆಪದಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಆದರೆ ಕಳೆದ ಎರಡು ವರ್ಷದಲ್ಲಿ  ಕೇರಳ ಭಾಗದ ಕಾಯರ್ ಪದವುನಿಂದ ಮುಳ್ಳೇರಿಯದವರೆಗೆ ಕೇರಳ ಸರಕಾರ ಉತ್ತಮ ರಸ್ತೆ ನಿರ್ಮಾಣ ಮಾಡಿದೆ ಮತ್ತು ಕರ್ನಾಟಕ ಭಾಗದ ಸುಳ್ಯಪದವಿನಿಂದ ಕಾಯರ್ ಪದವು ವರೆಗೆ  ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಉತ್ತಮ ರಸ್ತೆ ನಿರ್ಮಾಣ ಗೊಂಡಿದೆ. ಆದರೂ ಯಾಕೆ ಬಸ್ ಸಂಚಾರ ಪುನಃ ಆರಂಭಿಸಿಲ್ಲ ಎಂದು ಪ್ರಶ್ನಿಸಿದ ಸದಸ್ಯ ಸಂತೋಷ ಆಳ್ವ ಗಿರಿಮನೆ ರವರು, ಈ ಪ್ರದೇಶ ಕೇರಳ ಕರ್ನಾಟಕ ಗಡಿಭಾಗದಲ್ಲಿರುವುದರಿಂದ  ಜನರು ಹೆಚ್ಚು ಕಾಸರಗೋಡು ಭಾಗಕ್ಕೆ ಸಂಪರ್ಕವನ್ನು ಹೊಂದಿದ್ದಾರೆ.  ಮತ್ತು ಅವಶ್ಯಕ ವಸ್ತುಗಳಿಗೆ ಕಾಸರಗೋಡನ್ನು ಅವಲಂಬಿಸುತ್ತಿದ್ದಾರೆ. ಕರೋನಾ ಮಹಮಾರಿ ಆನಂತರ ದಿನಗಳಿಂದ ಇವತ್ತಿನ ವರೆಗೆ ಸುಳ್ಯಪದವು ಭಾಗದಿಂದ ಸರಿಯಾದ ಸಮಯದಲ್ಲಿ ಯಾವುದೇ ವಾಹನ ಸಂಚಾರವಿಲ್ಲದೆ ಜನರು ಕಷ್ಟ ಪಡುವ ಷರಿಸ್ಥಿತಿ ಉಂಟಾಗಿದೆ ಈ ಬಗ್ಗೆ ಶಾಸಕರ ಮೂಲಕ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳಿಗೆ ಬರೆಯಲು ನಿರ್ಣಯಿಸುವಂತೆ ಒತ್ತಾಯಿಸಿದರು. ಈ ಬಗ್ಗೆ  ಸಭೆಯಲ್ಲಿ ಚರ್ಚಿಸಿ ಸರ್ವಾನುಮತದಿಂದ ನಿರ್ಣಯ ಕೖೆಗೊಳ್ಳಲಾಯಿತು.

ಪುತ್ತೂರು-ರೆಂಜ ಮಾರ್ಗವಾಗಿ -ಮುಡಿಪಿನಡ್ಕದವರೆಗೆ  ಬರುತ್ತಿರುವ ಬೆಳಗಿನ 8 ಗಂಟೆಯ ಬಸನ್ನು ಮೖೆಂದನಡ್ಕದವರೆಗೆ ವಿಸ್ತರಿಸುವಂತೆ ಇಲಾಕಾಧಿಕಾರಿಗಳಿಗೆ ಬರೆಯಲು ಸದಸ್ಯ ಸಂತೋಷ ಆಳ್ವ ಒತ್ತಾಯಿಸಿ ಮಾತನಾಡಿ, ಪುತ್ತೂರು-ಕೌಡಿಚ್ಚಾರ್ ಮುಡಿಪಿನಡ್ಕ ಮಾರ್ಗವಾಗಿ ಸುಳ್ಯಪದವಿಗೆ ಬೆಳಗ್ಗೆ 8 ಗಂಟೆಗೆ ತಲುಪುವ ಬಸ್ ಸುಳ್ಯಪದವಿಂದ ಬೆ.8.15  ತಿರುಗಿ ಪುತ್ತೂರಿಗೆ ಹೋಗುತ್ತದೆ. ವಾರದಲ್ಲಿ ಒಂದೆರಡು ದಿವಸ ಬಸ್ ಬರದೇ ಇರುತ್ತದೆ ಮತ್ತೆರಡು ದಿವಸ ತಡವಾಗಿ ಬರುತ್ತದೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಾಲಾ ಸಮಯಕ್ಕೆ ತಲುಪಲು ಸಾದ್ಯವಾಗದೆ ಸಮಸ್ಯೆ ಎದುರಿಸುತ್ತಾರೆ. ಈ ನಿಟ್ಟಿನಲ್ಲಿ ಪುತ್ತೂರು- ರೆಂಜ ಮಾರ್ಗವಾಗಿ  ಮುಡಿಪಿನಡ್ಕಕ್ಕೆ ಬರುವ ಬಸ್ಸನ್ನು ಮೖೆಂದನಡ್ಕದವರೆಗೆ ವಿಸ್ತರಿಸುವುದು ಉತ್ತಮ ಎಂದರು. ಈ ಬಗ್ಗೆ ಪಿಡಿಒ ಬಿ. ಸಿ ಸುಬ್ಬಯ್ಯ ಎರಡನ್ನು ನಿರ್ಣಯ ಮಾಡಿ ಕಳಿಸೋಣ ಎಂದು ಹೇಳಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯಲು ನಿರ್ಣಯಿಸಲಾಯಿತು.

ಪಂಚಾಯತ್ ಸಿಬ್ಬಂದಿಯೊಬ್ಬರಿಗೆ ವೇತನ ಹೆಚ್ಚು ಮಾಡಿದ ಅದೇ ತಿಂಗಳಲ್ಲಿ ಹೆಚ್ಚುವರಿ ವೇತನ ನೀಡಿದ್ದು ಕಾನೂನು ರೀತಿಯಲ್ಲಿ ತಪ್ಪು. ಯಾವುದೇ ನಿರ್ಣಯ ಅನುಷ್ಠಾನಕ್ಕೆ ಬರುವುದು ಮುಂದಿನ ಸಾಮಾನ್ಯ ಸಭೆಯ ಆನಂತರ  ನೀವು ಅದೇ ತಿಂಗಳ ಹೆಚ್ಚುವರಿ ವೇತನ ನೀಡಿದ್ದು ಹೇಗೆ ಎಂದು ಪಿಡಿಒ ರವರನ್ನು ಸದಸ್ಯ ರವಿರಾಜ ರೖೆ ಸಜಂಕಾಡಿ ಪ್ರಶ್ನಿಸಿದರು. ಈ ಬಗ್ಗೆ ಪಿಡಿಒ ಬಿಸಿ ಸುಬ್ಬಯ್ಯ ಉತ್ತರಿಸಿ  ಎರಡು ಪಂಚಾಯತ್ ಗಳ ಕೆಲಸದ ಒತ್ತಡಗಳಿಂದ ಗಡಿಬಿಡಿ ಆಗಿದೆ. ಮುಂದಿನ ತಿಂಗಳ ಸಂಬಳ ನೀಡುವಾಗ ಸರಿಪಡಿಸುತ್ತೇನೆ ಎಂದರು.

15 ಹಣಕಾಸು ಯೋಜನೆ ಕ್ರಿಯಾಯೋಜನೆ ತಯಾರಿ ತಕ್ಷಣ ಕಾಮಾಗಾರಿ ಪ್ರಾರಂಭಿಸಿ ಡಿಸೆಂಬರ್ ಅಂತ್ಯದೊಳಗೆ ಕಾಮಾಗಾರಿ ಪೂರ್ಣಗೊಳಿಸಬೇಕು ಇಲ್ಲದಿದ್ದಲ್ಲಿ ಹಣ ವಾಪಸ್ ಆಗುತ್ತದೆ. ಮತ್ತು  ಮುಂದೆ ತಾ.ಪಂ. ಹಾಗೂ ಜಿ. ಪಂ ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಆಡಳಿತಾಧಿಕಾರಿ ನೇಮಕ ಆಗುತ್ತದೆ. ಆ ನಂತರ ಯಾವುದೇ ಕಾಮಗಾರಿ ನಡೆಯುವುದು ಅಸಾಧ್ಯ. ಆದರಿಂದ ತಮ್ಮ ತಮ್ಮ ವಾರ್ಡ್ ಕಾಮಗಾರಿ ಕ್ರಿಯಾಯೋಜನೆ ತಯಾರಿಸಿ ತಕ್ಷಣ ಗುತ್ತಿಗೆಧಾರದಲ್ಲಿ ಕಾಮಗಾರಿ ಆರಂಭಿಸಲು ತಿಳಿಸುವಂತೆ ಸದಸ್ಯರ ಗಮನಕ್ಕೆ ತಂದರು.

ಸಭೆಯಲ್ಲಿ ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ಸಂತೋಷ ಆಳ್ವ ಗಿರಿಮನೆ ಧರ್ಮೇಂದ್ರ ಕುಲಾಲ್ ಪದಡ್ಕ, ರವಿಚಂದ್ರ ಸಾರೆಪ್ಪಾಡಿ, ಕುಮಾರ ಅಂಬಟೆಮೂಲೆ, ವೆಂಕಟೇಶ್ ಕನ್ನಡ್ಕ, ಕಲಾವತಿ ಗೌಡ ಷಟ್ಲಡ್ಕ, ಶ್ರೀಮತಿ ಕನ್ನಡ್ಕ, ದಮಯಂತಿ ಕೆಮನಡ್ಕ,, ಸುಜಾತ ಮೖೆಂದನಡ್ಕ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮೋಡಿಕೆ ಉಪಸ್ಥಿತರಿದ್ದರು.

ಗ್ರಾ. ಪಂ ಪಿಡಿಒ ಬಿ. ಸಿ ಸುಬ್ಬಯ್ಯ ಸ್ವಾಗತಿಸಿ, ಕಾರ್ಯದರ್ಶಿ ಕೊರಗಪ್ಪ ನಾಯ್ಕ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here