ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ಚುನಾವಣೆಗೆ ಈ ಮೊದಲು ಬಿಜೆಪಿಯು 10 ವಾರ್ಡ್ ಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಬಾಕಿಯಾಗಿದ್ದ ಮೂರು ವಾರ್ಡ್ ಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.
ಕಳಾರ ವಾರ್ಡಿಗೆ ಪ್ರೇಮ, ಮಜ್ಜಾರು ವಾರ್ಡಿಗೆ ಮೋಹನ, ಪಣೆಮಜಲು ವಾರ್ಡಿಗೆ ಗಣೇಶ ಅವರನ್ನು ಅಭ್ಯರ್ಥಿಗಳನ್ನಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಘೋಷಣೆ ಮಾಡಿದ್ದಾರೆ ಎಂದು ಕಡಬ ಬಿಜೆಪಿ ಚುನಾವಣಾ ಕಛೇರಿ ಉಸ್ತುವಾರಿ ಶ್ರೀಕೃಷ್ಣ ಎಂ.ಆರ್. ತಿಳಿಸಿದ್ದಾರೆ.