ತುಳು ಪೂವರಿ ಮಾಸಿಕ ಸಂಚಿಕೆ ಬಿಡುಗಡೆ

0

ಸಾಹಿತ್ಯದ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಲಿ- ವಿ.ಬಿ.ಕುಳಮರ್ವ

ಪುತ್ತೂರು: ಪ್ರತಿಕೆಗಳಲ್ಲಿ ಇತ್ತೀಚೆಗೆ ಸಾಹಿತ್ಯ ಬರಹಗಳು ಕಡಿಮೆಯಾಗುತ್ತಿವೆ. ಕಥೆ ಕವನಗಳು ಪ್ರಕಟವಾಗುವುದೇ ಇಲ್ಲ. ಸಾಹಿತ್ಯ ಓದುವ ಅಭಿರುಚಿ ಕುಂಠಿತವಾಗುತ್ತಿದೆ ಎಂದು ನಿವೃತ್ತ ಶಿಕ್ಷಕ , ಕವಿ ವಿ.ಬಿ. ಕುಳಮರ್ವ ಕಾಸರಗೋಡು ಹೇಳಿದರು.


ಅವರು ಪುತ್ತೂರಿನ ರೋಟರಿ ಜಿ.ಎಲ್. ಸಭಾಭವನದಲ್ಲಿ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು ಸಂಪಾದಕತ್ವದ ಪೂವರಿ ತುಳು ಮಾಸಿಕ ಪ್ರತಿಕೆಯ ಜುಲೈ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಹಿರಿಯ ಕವಿ ಗುಣಾಜೆ ರಾಮಚಂದ್ರ ಭಟ್ ಶಿಕ್ಷಕ ಕವಿಗಳಿಗಾಗಿ ಏರ್ಪಡಿಸಿದ ಅಂತಾರಾಜ್ಯಮಟ್ಟದ ಆಚಾರ್ಯ ಕವಿಗೋಷ್ಠಿಗೆ ಚಾಲನೆ ನೀಡಿ ಬಳಿಕ ಸ್ವರಚಿತ ಏಳೆ ಛಂದಸ್ಸಿನ ಕವನ ವಾಚನ ಮಾಡಿದರು.


ನಿವೃತ್ತ ಪ್ರಾಚಾರ್ಯ ಗಝಲ್ ಕವಿ ಡಾ. ಸುರೇಶ ನೆಗಳಗುಳಿ ಮಾತನಾಡಿ ಕವಿಗಳು ಭಾವಕ್ಕೆ ಬದ್ಧರಾಗಿ ತಮ್ಮದೇ ಚೌಕಟ್ಟಿನಲ್ಲಿ ಕವನ ರಚಿಸಿದರೆ ಭಾವಪೂರ್ಣವಾಗಿರುತ್ತದೆ ಎಂದು ಶುಭಹಾರೈಸಿ ಮಾತನಾಡಿದರು. ಹಿರಿಯಪತ್ರಕರ್ತ ರೈಮಂಡ್ ಡಿಕುನ್ಹ ತಾಕೊಡೆ, ಕವಿಗಳಾದ ಹಾ.ಮ. ಸತೀಶ ಬೆಂಗಳೂರು, ಕೆ. ಪುರಂದರ ಭಟ್ , ಜಯಪ್ರಕಾಶ್ ರಾವ್ ಉಪಸ್ಥಿತರಿದ್ದರು.


ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಾನಂದ ಪೆರಾಜೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಕವಿಗಳಾದ ಕವಿತಾ ಉಮೇಶ್ ಉಜಿರೆ, ಪುಷ್ಪಲತಾ ಎ.ವಿ. ಮಂಗಳೂರು, ಸುಜಾತ ರೈ ಪಾಲ್ತಾಡಿ, ಮಾಲತಿ ಬೆಂಗಳೂರು, ಲಕ್ಷ್ಮೀ ಭಟ್ ಮಂಗಳೂರು, ಜನಾರ್ದನ ದುರ್ಗ ಹಾರಾಡಿ, ಮಮತಾ ಕಿರಣ್ ಬಿ.ಸಿ.ರೋಡು, ಶ್ವೇತಾ ಡಿ. ಬಡಗಬೆಳ್ಳೂರು, ಗೀತಾ ಕೊಂಕೋಡಿ ಮಿತ್ತೂರು, ದಿಲೀಪ್ ವೇದಿಕ್ ಕಡಬ, ಕಿಶೋರಿ ವಿ. ಮಧ್ವ, ರತ್ನಾ ಕೆ. ಭಟ್ ತಲಂಜೇರಿ, ಜಯರಾಮ ಪಡ್ರೆ ಶಂಭೂರು, ಜಯಶ್ರೀ ಶೆಣೈ ಬಂಟ್ವಾಳ, ಹರಿಣಾಕ್ಷಿ ಪಿ. ಬೆಳ್ತಂಗಡಿ, ದೇವಕಿ ಜಯಾನಂದ ಉಪ್ಪಿನಂಗಡಿ, ರಮೇಶ್ ಮೆಲ್ಕಾರ್ ತುಂಬೆ, ರಾಜಗೋಪಾಲ ಎನ್ ಬಡಗನ್ನೂರು, ಪರಮೇಶ್ವರಿ ಪ್ರಸಾದ್ ಮಂಗಳೂರು, ಡಾ. ಮೈತ್ರಿ ಭಟ್ ವಿಟ್ಲ, ಮೆರ್ಲಿನ್ ಮೇಬಲ್ ಮಸ್ಕರೇನಸ್, ಫ್ಲಾವಿಯಾ ಅಲ್ಬುಕರ್ಕ್ , ಸಂಧ್ಯಾ ಕೆಯ್ಯೂರು, ದಿವ್ಯಾ ರೈ ಪೆರುವಾಜೆ ಕುಂಬ್ರ , ಸಂಜೀವ ಮಿತ್ತಳಿಕೆ ಓಜಾಲ, ಮುರಾರಿ ರಾವ್ ಹೊಸಬೆಟ್ಟು , ವಿದ್ಯಾಶ್ರೀ ಅಡೂರು, ಡಾ. ವಾಣಿಶ್ರೀ ಕಾಸರಗೋಡು, ಡಾ. ಶಾಂತಾ ಪುತ್ತೂರು, ರೋಹಿಣಿ ಆಚಾರ್ಯ ,ಮಲ್ಲಿಕಾ ಜೆ ರೈ ಪುತ್ತೂರು ಸ್ವರಚಿತ ಕವನಗಳನ್ನು ವಾಚಿಸಿದರು.


ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ.ಕ. ಜಿಲ್ಲೆ, ಕಥಾ ಬಿಂದು ಪ್ರಕಾಶನ ಮಂಗಳೂರು,ಸ್ವರ್ಣೋದ್ಯಮಿ ಜಿ.ಎಲ್.ಆಚಾರ್ಯ ಶತಮಾನೋತ್ಸವ ಸಮಿತಿ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here