ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ “ಉತ್ತಮ ಸ್ಪರ್ಶ, ಕೆಟ್ಟ ಸ್ಪರ್ಶ ಹಾಗೂ ಪೋಕ್ಸೋ ಕಾಯ್ದೆ” ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಿಟ್ಟೆ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಸಹಾಯಕ ಉಪನ್ಯಾಸಕಿ ಮತ್ತು ಸಲಹೆಗಾರರಾದ ಡಾ. ಶ್ರೀವಿದ್ಯಾ ಪಿ.ಅವರು ವಿದ್ಯಾರ್ಥಿಗಳಿಗೆ ಉತ್ತಮ ಮತ್ತು ಕೆಟ್ಟ ಸ್ಪರ್ಶದ ವ್ಯತ್ಯಾಸವನ್ನು ಸರಳವಾಗಿ ವಿವರಿಸಿದರು. ಮಕ್ಕಳು ತಮ್ಮ ಭಾವನೆಗಳನ್ನು ಗುರುತಿಸಿ, ಯಾವುದೇ ಅನಿಸಿಕೆಯಿಂದ ಅಸಹಜವಾಗಿ ತೋರುತ್ತಿದ್ದಲ್ಲಿ ತಕ್ಷಣ ತಮಗೆ ವಿಶ್ವಾಸವಿರುವ ಹಿರಿಯರಿಗೆ ಅಥವಾ ಮಕ್ಕಳ ಸಹಾಯವಾಣಿಗೆ ತಿಳಿಸಲು ಪ್ರೇರೇಪಿಸಿದರು. ಪೋಕ್ಸೋ ಕಾಯ್ದೆಯ ಮುಖ್ಯ ಅಂಶಗಳನ್ನೂ ವಿವರಿಸಿ, ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಕಾರ್ಯದರ್ಶಿ ಕೆ. ಸೇಸಪ್ಪ ರೈಯವರು ಮಾತನಾಡಿ, ತಮ್ಮ ಭಾಷಣದಲ್ಲಿ ಮಕ್ಕಳ ರಕ್ಷಣೆಗೆ ಈ ತರಹದ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು. ಪ್ರಾಂಶುಪಾಲ ಪ್ರವೀದ್ ಪಿ.ಸ್ವಾಗತಿಸಿ, ಮಕ್ಕಳ ಭದ್ರತೆ ಹಾಗೂ ಜಾಗೃತಿ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಪ್ರಶ್ನೆ-ಉತ್ತರದ ಭಾಗದಲ್ಲಿ ಚುರುಕಾಗಿ ಪಾಲ್ಗೊಂಡರು. ಸಹಶಿಕ್ಷಕಿ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.