





ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನಲ್ಲಿ ರಕ್ಷಾ ಬಂಧನ ಮತ್ತು ಸಂಸ್ಕತ ಸಪ್ತಾಹ ಕಾರ್ಯಕ್ರಮ ಆ.9ರಂದು ನಡೆಯಿತು.


ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ, ಸಂಸ್ಕೃತ ಕಠಿಣ ಭಾಷೆ ಅಲ್ಲ ಸುಲಭ ಭಾಷೆಯಾಗಿದೆ. ನೇಪಾಳದಲ್ಲಿ ಸಂಸ್ಕೃತವನ್ನು ಆಡುಭಾಷೆಯಾಗಿ ಮಾತನಾಡುತ್ತಾರೆ. ಸಂಸ್ಕೃತ ಎಲ್ಲರಿಗೂ ಪಾಠಶಾಲೆಯಲ್ಲಿ ಮಾತ್ರವಲ್ಲದೆ ನಂತರದ ಕಾಲದಲ್ಲಿ ಕಲಿಯಬಹುದು. ಕಲಿಯಲು ವಯಸ್ಸಿನ ಮಿತಿ ಇಲ್ಲ. ಹಾಗೂ ನಮ್ಮ ದೇಶವನ್ನು ಉಳಿಸಲು ನಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನ ಪಡಬೇಕು, ರಕ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ರಕ್ಷಾಬಂಧನ ದಿನವನ್ನು ಆಚರಿಸುತ್ತೇವೆ ಎಂದರು.






ಶಾಲಾ ಸಂಸ್ಕೃತ ಶಿಕ್ಷಕ ಕುಶಾಲ್ ಸಂಸ್ಕೃತ ಸಪ್ತಾಹದ ಬಗ್ಗೆ ಮತ್ತು ರಕ್ಷಾಬಂಧನದ ಮಹತ್ವವನ್ನು ತಿಳಿಸಿದರು. ನಂತರ ವಿದ್ಯಾರ್ಥಿಗಳಿಂದ ರಾಖಿ ಧಾರಣೆ ನಡೆಯಿತು.
ಈ ಸಂದರ್ಭದಲ್ಲಿ , ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಾದ ಅಹಲ್ಯ ಬನಾರಿ ಮತ್ತು ಮೌಲ್ಯ ಪ್ರಾರ್ಥಿಸಿದರು. ಶಾಲಾ ಮುಖ್ಯೋಪಾಧ್ಯಾಯ ಪ್ರಸನ್ನ ಕೆ ಸ್ವಾಗತಿಸಿದರು. ಅನಿತಾ ಕೆ ವಂದಿಸಿದರು. ರಮೇಶ್ ಎನ್ ರವರು ಕಾರ್ಯಕ್ರಮ ನಿರೂಪಿಸಿದರು.









