ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕರ್ನೂರು ಒಕ್ಕೂಟದ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ ಅ.10ರಂದು ನೆಟ್ಟನ್ನಿಗೆ ಮೂಡ್ನೂರು, ಕರ್ನೂರು ಸ.ಹಿ.ಪ್ರಾ ಶಾಲೆಯಲ್ಲಿ ಒಕ್ಕೂಟದ ಅಧ್ಯಕ್ಷೆ ಆಶಾಲತಾ ರೖೆ ರವರ ನೇತೃತ್ವದಲ್ಲಿ ನಡೆಯಿತು.

ಕರ್ನೂರು ಒಕ್ಕೂಟದ ಸೇವಾಪ್ರತಿನಿಧಿ ಕುಸುಮ ರೖೆ ರವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಒಕ್ಕಟದ ಉಪಾಧ್ಯಕ್ಷ ಸುಬ್ಬಣ್ಣ ರೖೆ, ಶಾಲಾ ಮುಖ್ಯ ಶಿಕ್ಷಕ ರಮೇಶ್ ಶಿರ್ಲಾಲು, ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು ಸೇರಿ ಒಟ್ಟು ಸುಮಾರು 35 ಮಂದಿ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸದಸ್ಯರಾದ ವೀಣಾ ಸ್ವಾಗತಿಸಿ, ಪ್ರಮೀಳಾ ವಂದಿಸಿದರು.