ಕೆಮ್ಮಾಯಿ: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಎಸ್ ವೈ ಎಸ್ ಕೆಮ್ಮಾಯಿ ವತಿಯಿಂದ ಎಸ್ ವೈ ಎಸ್ ಕಛೇರಿ ಆವರಣದಲ್ಲಿ ಆಚರಿಸಲಾಯಿತು. ಅಬ್ದುಲ್ ರಹಿಮಾನ್ ನಿಝಾಮಿ ದುಆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಎಸ್ ವೈ ಎಸ್ ಕೆಮ್ಮಾಯಿ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಸಖಾಫಿ ಬಳ್ಳಾರಿ ಸ್ವಾಗತಿಸಿದರು. ಎಸ್ ವೈ ಎಸ್ ಪುತ್ತೂರು ಸರ್ಕಲ್ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಕೆಮ್ಮಾಯಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ KMJ ಕೆಮ್ಮಾಯಿ ಅಧ್ಯಕ್ಷರಾದ ಅಬ್ಬುಲ್ ಶಕೂರ್, KMJ ಕೆಮ್ಮಾಯಿ ಸಂಘಟನಾ ಕಾರ್ಯದರ್ಶಿ ಹಸೈನಾರ್ KPH, SSF ಕೆಮ್ಮಾಯಿ ಅಧ್ಯಕ್ಷ ರಾದ ಕಿಲ್ರ್, ಝಯಿದ್, ಖಲೀಲ್, ಹಾಫಿಝ್ ಶರೀಫ್, ಸಂಶುದ್ದೀನ್ ಕೆಮ್ಮಾಯಿ, ಮೊದಲಾದವರು ಉಪಸ್ಥಿತರಿದ್ದರು. ಎಸ್ ವೈ ಎಸ್ ಕೆಮ್ಮಾಯಿ ಅಧ್ಯಕ್ಷರಾದ ಅಬ್ದುಲ್ ಅಝೀಝ್ ವಂದಿಸಿದರು.