ಪುತ್ತೂರು : ಕೋಡಿಂಬಾಡಿ ನೂರುಲ್ ಹುದಾ ಜುಮಾ ಮಸೀದಿ ಹಾಗೂ ನೂರುಲ್ ಹುದಾ ಮದ್ರಸ ಜಂಟಿ ಆಶ್ರಯದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಯಿತು. ನೂರುಲ್ ಹುದಾ ಜುಮಾ ಮಸೀದಿಯ ಗೌರವಾನ್ವಿತ ಅಧ್ಯಕ್ಷರಾದ ಯು.ಕೆ ಉಮರ್ ಹಾಜಿ ಧ್ವಜಾರೋಹಣ ನೇರವೇರಿಸಿದರು.
ಮದ್ರಸ ಮುಖ್ಯಾಧ್ಯಪಕರಾದ ಅಬ್ಧುಲ್ ನಾಸೀರ್ ಫೈಝಿ ದಿಕ್ಸೂಚಿ ಭಾಷಣ ಮಾಡಿದರು. ವಿಧ್ಯಾರ್ಥಿನೀಯರಾದ ಫಾತಿಮತ್ ನಯೀಮ ಹಾಗೂ ಸ್ವಾಬಿರ ರಾಷ್ಟ್ರಗೀತೆ ಹಾಡಿದರು.ಪ್ರಸ್ತುತ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಅಬೂಬಕರ್ ಸುಲ್ತಾನ್ , ಪ್ರಧಾನ ಕಾರ್ಯದರ್ಶಿಯಾದ ಸಬೀರ್ ಸರ್ಗ , ಕೋಶಾಧಿಕಾರಿಯಾದ ಅಬ್ಧುಲ್ ರಹ್ಮಾನ್ , ಹುಸೈನ್ ಹಾಜಿ ಕೆ.ಬಿ.ಕೆ , ದಾವೂದ್ ಹಾಜಿ ಕೆ.ಬಿ.ಕೆ , ಮುಹಮ್ಮದ್ ಕೆ , ಹಾಗೂ ಮದ್ರಸ ವಿಧ್ಯಾರ್ಥಿಗಳು , ಆಡಳಿತ ಕಮೀಟಿ ಸದಸ್ಯರು , ಹಾಗೂ ಜಮಾಅತಿನ ಇತರ ಸಹೋದರರು ಭಾಗವಹಿಸಿದರು.