ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತಿ ವತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶರತ್ ಕುಮಾರ್ ಇವರ ನೇತೃತ್ವದಲ್ಲಿ ಮೂರನೇ ಶನಿವಾರವಾದ ಆ.16ರಂದು ದೇವಿ ನಗರದಿಂದ ಕೆಯ್ಯೂರು ಶಾಲಾ ಬ ಳಿಯವರೆಗೆ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಮತ್ತು ಶಾಲಾ ಬಳಿಯಿಂದ ಸಂತೋಷನಗರ ಗ್ರಾಮ ಪಂಚಾಯತದವರೆಗೆ ಗ್ರಾಮ ಪಂಚಾಯತ್ ಸದಸ್ಯರುಗಳು, ಸಿಬ್ಬಂದಿ ವರ್ಗದವರಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಪಂಚಾಯತ್ ಸಿಬ್ಬಂದಿಗಳು, ಅರಿವುಕೇಂದ್ರದ ಮೇಲ್ವಿಚಾರಕಿ ಅನೂಷಾ ಕೆಯ್ಯೂರು,ವಿ ಆರ್ ಡಬ್ಲ್ಯೂ ಸಹಿತ ಹಲವು ಮಂದಿ ಭಾಗವಹಿಸಿದ್ದರು. ಮಳೆಯ ನಡುವೆಯೂ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.