ಕೆಎಸ್‌ಆರ್‌ಟಿಸಿ 6 ಹೊಸ ಮಾರ್ಗಗಳ ಬಸ್‌ಗಳಿಗೆ ಹಸಿರು ನಿಶಾನೆ

0

ಮುಂದಿನ ದಿನ ಪುತ್ತೂರಿನಲ್ಲಿ ಸಿಟಿ ಬಸ್‌ಗಳನ್ನು ಓಡಿಸುವ ಚಿಂತನೆ – ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ನಾಲ್ಕೈದು ವರ್ಷದಲ್ಲಿ ಇಲ್ಲಿ ನೇಮಕಾತಿ ಆಗದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರು ಮತ್ತು ನಿರ್ವಾಹಕರ ಕೊರತೆ ಇತ್ತು. ಇವತ್ತು ಅದನ್ನು ನಿವಾರಿಸಲಾಗಿದೆ. ಇವತ್ತು ಬೇಡಿಕೆಗೆ ಅನುಗುಣವಾಗಿ 6 ಹೊಸ ಬಸ್ ಮಾರ್ಗಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನ ಪುತ್ತೂರಿನಲ್ಲಿ ಸಿಟಿ ಬಸ್‌ಗಳನ್ನು ಓಡಿಸುವ ಚಿಂತನೆ ಮಾಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಇವತ್ತು 6 ಹೊಸ ಮಾರ್ಗದಲ್ಲಿ ಬಸ್‌ಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಜೊತೆಗೆ ಸುಳ್ಯ ಮತ್ತು ಉಪ್ಪಿನಂಗಡಿಗೂ ಹೆಚ್ಚುವರಿ ಬಸ್ ಹಾಕಲಾಗಿದೆ. ನಮ್ಮ ಸರಕಾರ, ಮುಖ್ಯಮಂತ್ರಿ, ಸಾರಿಗೆ ಮಂತ್ರಿಗಳು ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದಾರೆ. ಮುಂದಿನ ದಿನ ಪುತ್ತೂರಿನಲ್ಲಿ ಸಿಟಿ ಬಸ್‌ಗಳನ್ನು ಓಡಿಸುವ ಚಿಂತನೆ ಇದೆ. ಅದಕ್ಕೆ ಆಟೋ ರಿಕ್ಷಾ ಚಾಲಕರನ್ನು ಕರೆಸಿ ಸಾಧಕ ಬಾಧಕಗಳನ್ನು ಚರ್ಚಿಸಿ ಮತ್ತೆ ಸಿಟಿ ಬಸ್ ಆರಂಭಿಸಲಾಗುವುದು. ಕೆಎಸ್‌ಆರ್‌ಟಿಸಿಯಲ್ಲಿ ಯಾವುದೇ ಬಸ್‌ಗಳ ಕೊರತೆಯಿಲ್ಲ. ಸಾಲೆತ್ತೂರಿನ ಭಾಗಕ್ಕೆ ಬೇಡಿಕೆ ಮೇರೆಗೆ ಬಸ್ ವ್ಯವಸ್ಥೆ ಆಗಿದೆ. ಎಲ್ಲಿಯೂ ಕೂಡಾ ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ಬಸ್ ಹಾಕಲಾಗಿದೆ. ಇನ್ನಷ್ಟು ಬೇಡಿಕೆ ಇದ್ದಲ್ಲಿ ಹಂತಹಂತವಾಗಿ ಬಸ್ ಕೊಡಿಸುವ ಕೆಲಸ ಮಾಡಿಸುತ್ತೇನೆ. ಪ್ರಯಾಣಿಕರು ಅದನ್ನು ಸರಿಯಾಗಿ ಬಳಸಿಕೊಂಡಲ್ಲಿ ಮಾತ್ರ ಅದನ್ನು ಮುಂದುವರಿಸಲಾಗುವುದು. ಖಾಲಿ ಬಸ್ ಓಡಿದರೆ ಬಸ್ ಸಂಚಾರ ನಿಲ್ಲಿಸಲಾಗುವುದು. ಸರಕಾರಕ್ಕೆ ಯಾವುದೇ ಹೊರೆ ಆಗದಂತೆ ಕೆಲಸ ಆಗಲಿದೆ. ಶಾಲಾ ಮಕ್ಕಳು ಬೊಳುವಾರಿನಿಂದ ಇಲ್ಲಿನ ತನಕ ಪಾಸ್ ಆಗಬೇಕೆಂದ ಮನವಿಗೂ ಸ್ಪಂದಿಸಿದ್ದೇವೆ ಎಂದರು.


ಒಂದೇ ತಿಂಗಳಲ್ಲಿ ಶಾಸಕರು ಬಸ್ ಕೊಡಿಸಿದ್ದಾರೆ:
ಕೊಲ್ನಾಡು ಗ್ರಾ.ಪಂ ಉಪಾಧ್ಯಕ್ಷೆ ಅಸ್ಮ ಮಾತನಾಡಿ ನಮ್ಮ ಭಾಗದಲ್ಲಿ ಬಸ್‌ನ ಸಮಸ್ಯೆ ಇತ್ತು. ಈ ಕುರಿತು ನಾವು ಕೆಎಸ್‌ಆರ್‌ಟಿಸಿ ಅಽಕಾರಿಗಳಿಗೆ ಮನವಿ ಮಾಡಿದ್ದೆವು. ಅದರೆ ಅದು ಪ್ರಯೋಜನ ಆಗಿರಲಿಲ್ಲ. ಕೊನೆಗೆ ನಾವು ಪುತ್ತೂರು ಶಾಸಕರಿಗೆ ಮನವಿ ಮಾಡಿದೆವು. ಅವರು ಒಂದು ತಿಂಗಳೊಳಗೆ ಬಸ್ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಅವರು ನೀಡಿದ ಭರವಸೆಯಂತೆ ಇವತ್ತು ಬಸ್ ಸಂಚಾರ ಆರಂಭಗೊಂಡಿದೆ. ಇದು ನಮಗೆ ಸಂತೋಷದ ವಿಷಯ ಎಂದರು.


ನಮ್ಮ ಶಾಸಕರು ಕಾಮಧೇನುವಿನಂತೆ:
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ನಮ್ಮ ಶಾಸಕರು ಕಾಮಧೇನುವಿನಂತೆ ಏನು ಕೇಳಿದರೂ ಆಗುವುದಿಲ್ಲ ಎಂದು ಹೇಳುವುದಿಲ್ಲ. ಎಲ್ಲವನ್ನು ಕೊಡುತ್ತಾರೆ. ರಾಜ್ಯದಲ್ಲಿ ಎಲ್ಲೂ ಇಷ್ಟೊಂದು ಡ್ರೈವರ್ ಕಂಡಕ್ಟರ್ ಇರುವ ವಿಧಾನಸಭೆ ಕ್ಷೇತ್ರ ಇರಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಶಾಸಕರು ಖುದ್ದು ಚಾಲಕ ಮತ್ತು ನಿರ್ವಾಹಕರಿಗೆ ತರಬೇತಿ ನೀಡುವ ಮೂಲಕ ಯಾವ ಭಾಗದ ಬಸ್ ಸಮಸ್ಯೆಯನ್ನು ಆಲಿಸಿ ಅಲ್ಲಿಗೆ ಬಸ್ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.


ಕ್ಷೇತ್ರವನ್ನು ನೋಡದೆ ಬಸ್ ಸೌಲಭ್ಯ ನೀಡಿದ್ದಾರೆ:
ಕೆಪಿಸಿಸಿ ಸಂಯೋಜಕ ಎಮ್.ಎಸ್ ಮಹಮ್ಮದ್ ಮಾತನಾಡಿ ಪುತ್ತೂರು ಶಾಸಕರು ಬಂಟ್ವಾಳ ಮತ್ತು ಪುತ್ತೂರಿಗೆ ಸಂಬಂಽಸಿದ ಕ್ಷೇತ್ರಕ್ಕೂ ಬಸ್ ನೀಡುವ ಮೂಲಕ ನನ್ನ ಕ್ಷೇತ್ರವಲ್ಲ ಎಂದು ನೋಡದೆ ಜನಸಾಮಾನ್ಯರ ಬೇಡಿಕೆಗೆ ಸ್ಪಂದಿಸಿದ್ದಾರೆ. ಪುತ್ತೂರಿನಿಂದ ಮಂಗಳೂರಿಗೆ ಎಕ್ಸ್‌ಪ್ರೆಸ್ ಬಸ್ ಹಾಕುವ ಮೂಲಕ ಅಪರೂಪದ ವಿಶೇಷ ಕಾರ್ಯಕ್ರಮ ಮಾಡಿ ತೋರಿಸಿದ್ದಾರೆ. ಇವರು ಒಂದಲ್ಲ ಒಂದು ದಿನ ರಾಜ್ಯ ಸರಕಾರದ ಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು. ಗ್ಯಾರೆಂಟಿ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, -ರುಕ್ ಬಾಯಬೆ, ನಗರಯೋಜನಾ ಪ್ರಾಧಿಕಾರದ ಸದಸ್ಯರಾದ ನಿಹಾಲ್ ಪಿ. ಶೆಟ್ಟಿ, ಲ್ಯಾನ್ಸಿ ಮಸ್ಕರೇನಸ್, ಕೊಡಪದವು ಗ್ರಾ.ಪಂ ಸದಸ್ಯ ಸುಭಾಶ್ಚಂದ್ರ ಶೆಟ್ಟಿ, ಬೊಂಡಾಲ ಚಿತ್ತರಂಜನ ಶೆಟ್ಟಿ, ಬಂಟ್ವಾಳ ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯ ಸಿರಾಜ್ ಮದಕ ಮತ್ತಿತರರು ಉಪಸ್ಥಿತರಿದ್ದರು. ಕೆ.ಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ್ ಸ್ವಾಗತಿಸಿ, ವೆಂಕಟ್ರಮಣ ಭಟ್ ವಂದಿಸಿದರು.

LEAVE A REPLY

Please enter your comment!
Please enter your name here