ಪುತ್ತೂರು: ಫ್ರೆಂಡ್ಸ್ ಪಡೀಲ್ ವತಿಯಿಂದ ಪಡೀಲ್ ನಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆ.15ರಂದು ನಡೆಯಿತು. ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಫ್ರೋ. ಮಾಧವ ಭಟ್ ಧ್ವಜಾರೋಹಣ ಮಾಡಿದರು.
ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭಾ ಅಧ್ಯಕ್ಷೆ ಲಿಲಾವತಿ, ಸದಸ್ಯರಾದ ಮೋಹಿನಿ ವಿಶ್ವನಾಥ, ಪದ್ಮನಾಭ ನಾಯ್ಕ್, ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಮಾಜಿ ನಗರಸಭಾ ಸದಶ್ಯ ವಿಶ್ವನಾಥ ಗೌಡ, ಮಾಜಿ ನಗರಸಭಾ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ರಾಧಕೃಷ್ಣ ಶೆಟ್ಟಿ, ಚೆನ್ನಪ್ಪ ಗೌಡ, ಆನೆಮಜಲು ಚಂದ್ರಹಾಸ ಶೆಟ್ಟಿ, ಲಯನ್ಸ್ ಕ್ಲಬ್ ಪುತ್ತೂರಿನ ಶಾರದ ಕೇಶವ, ಕವಿತ ದಿನಾಕರ, ಮಮತ, ವಿಲ್ಮಾ ಗೊನ್ಸಾಲ್ವಿಸ್ ಪಡೀಲ್,ಫ್ರೆಂಡ್ಸ್ ಪಡೀಲ್ ಸದಸ್ಯರಾದ ನಾರಾಯಣ ನಾಯ್ಕ್ ಪಡೀಲ್, ವನೀಶ್ ಬನ್ನೂರು, ದಿಲೀಪ್ ಕೆಮ್ಮಾಯಿ, ಶಿವ ಪಡೀಲ್, ಮೋಹನ್ ಶೆಟ್ಟಿ ಪಡೀಲ್, ಅಭಿಜಿತ್ ಬನ್ನೂರು, ಅವಿನಾಶ್ ಬನ್ನೂರು, ಕಿಶೋರ್ ಬನ್ನೂರು, ರಾಮು ಮೋನಪ್ಪ ಪೂಜಾರಿ, ಶೇಷಪ್ಪ ಪೂಜಾರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.