ಇನ್ನು 10 ದಿನದೊಳಗೆ ಬಂಟರ ಸಂಘದ ಹೆಸರಿಗೆ ಜಾಗ- ಅಶೋಕ್ ರೈ
ಅಶೋಕ್ ರೈ ಅವರಿಂದ ಪುತ್ತೂರಿಗೆ ಮೆಡಿಕಲ್ ಕಾಲೇಜ್- ಕಾವು ಹೇಮನಾಥ ಶೆಟ್ಟಿ
ಪುತ್ತೂರು : ತಾಲೂಕು ಬಂಟರ ಸಂಘದ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿಯ ಮಾರ್ಗದರ್ಶನದಲ್ಲಿ ಮಹಿಳಾ ಬಂಟರ ವಿಭಾಗ, ಯುವ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಪ್ರಪ್ರಥಮ ಬಾರಿಗೆ “ಬಂಟೆರೆ ಕೆಸರ್ಡ್ ಒಂಜಿ ಕುಸಲ್” ಕೈಕಾರ ಪನಡ್ಕ ಪಳ್ಳತ್ತಾರು ಶ್ರೀ ಜುಮಾದಿ ದೈವಸ್ಥಾನದ ಹತ್ತಿರ ಸರಸ್ವತಿ ಹೊಸಲಕ್ಕೆ ಇವರ ಗದ್ದೆಯಲ್ಲಿ ಜರಗಿತು.
ಇನ್ನು 10 ದಿನದೊಳಗೆ ಬಂಟರ ಸಂಘದ ಹೆಸರಿಗೆ ಜಾಗ- ಅಶೋಕ್ ರೈ
ಉದ್ಘಾಟನೆಯನ್ನು ಶಾಸಕ ಅಶೋಕ್ ಕುಮಾರ್ ರೈರವರು ನೇರವೇರಿಸಿ, ಬಂಟರ ಸಂಘದ ಸನ್ಮಾನವನ್ನು ಸ್ವೀಕರಿಸಿ, ಮಾತನಾಡಿ, ಕಾವು ಹೇಮನಾಥ ಶೆಟ್ಟಿಯವರು ಹೊಸ ಕಲ್ಪನೆಯೊಂದಿಗೆ ಬಂಟರ ಸಂಘದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ತಾಲೂಕು ಬಂಟರ ಸಂಘಕ್ಕೆ ಸ್ವಂತ ಜಾಗ ಆಗಬೇಕೆಂಬ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇನೆ. ಸರಕಾರದಿಂದ ಮೂರು ಎಕ್ರೆ ಜಾಗ ಮಂಜೂರಾಗಿದ್ದು, ಇನ್ನು 10 ದಿನದೊಳಗೆ ಆ ಜಾಗ ಬಂಟರ ಸಂಘದ ಹೆಸರಿಗೆ ಆಗಲಿದೆ. ಈಗಾಗಲೇ ಮಂಜೂರಾಗಿರುವ ಜಾಗದ ಪಕ್ಕ ಇನ್ನೂ ಎರಡುವರೆ ಎಕ್ರೆ ಜಾಗ ಇದ್ದು, ಅದು ಕೂಡ, ಬಂಟರ ಸಂಘಕ್ಕೆ ಮಂಜೂರಾಗುತ್ತದೆ. ಈ ಜಾಗದಲ್ಲಿ ಗುಣಮಟ್ಟದ ಇಂಗ್ಲೀಷ್ ಮೀಡಿಯಾ ಸ್ಕೂಲ್, ಸಭಾಭವನ ಸಹಿತ ಅನೇಕ ಕೆಲಸ ಆಗಲಿದ್ದು, ಈ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಹಣದ ಅವಶ್ಯಕತೆ ಇದೆ. ಬಂಟ ಸಮಾಜದಲ್ಲಿ ಹಣ ಇದ್ದವರು ತುಂಬಾ ಮಂದಿ ಇದ್ದರೆ, ಅವರುಗಳು ದೊಡ್ಡ ಮನಸು ಮಾಡಬೇಕು. ನಾನು ಸಹ ಕೈಜೋಡಿಸುತ್ತೇನೆ, ದಾನಿಗಳ ಸಹಕಾರದಲ್ಲಿ ನೂತನ ಜಾಗದಲ್ಲಿ ಒಳ್ಳೆಯ ಕೆಲಸ ಆಗಬೇಕು ಎಂದು ಹೇಳಿದರು. ಕಾವು ಹೇಮನಾಥ ಶೆಟ್ಟಿಯವರು ಬಂಟರ ಸಂಘವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಶಾಸಕ ಅಶೋಕ್ ರೈಯವರು ಸರಕಾರದ ಮೂಲಕ ತಾಲೂಕು ಬಂಟರ ಸಂಘಕ್ಕೆ ಈಗಾಗಲೇ ಮೂರು ಎಕ್ರೆ ಜಾಗವನ್ನು ಮಂಜೂರುಗೊಳಿಸಿದ್ದಾರೆ. ಇದಕ್ಕಾಗಿ ನಾನು ಶಾಸಕರನ್ನು ಅಭಿನಂದಿಸುತ್ತೇನೆ ಪುತ್ತೂರು ಪೇಟೆಯ ಪಕ್ಕ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಜಾಗ ದೊರೆತಿರುವುದು ತುಂಬಾ ಸಂತೋಷ ನೀಡಿದೆ. ಶಾಸಕ ಅಶೋಕ್ ರೈಯವರ ಬಂಟ ಸಮಾಜದ ಮಗನಾಗಿ ತನ್ನ ಸಮಾಜದ ಅಭಿವೃದ್ಧಿಯ ಜೊತೆಗೆ ಇತರ ಸಮಾಜದವರ ಅಭಿವೃದ್ಧಿಯನ್ನು ಸದಾ ಬಯಸುವ ಒರ್ವ ದಕ್ಷ ನಾಯಕನಾಗಿದ್ದು, ವಿಧಾನ ಸಭೆಗೆ ಪ್ರಥಮ ಬಾರಿ ಪ್ರವೇಶಮಾಡಿ, ವಿಧಾನ ಸಭಾ ಕಲಾಪದಲ್ಲಿ 12 ಪ್ರಶ್ನೆಗಳನ್ನು ಕೇಳಿ, ಸಮರ್ಪಕ ಉತ್ತರವನ್ನು ಪಡೆದಿದ್ದಾರೆ. ಪುತ್ತೂರಿಗೆ ಮೆಡಿಕಲ್ ಕಾಲೇಜ್ ಮಾಡುತ್ತೇವೆ ಎಂದು ಈ ಹಿಂದಿನ ಶಾಸಕರುಗಳು ರೈಲು ಬಿಟ್ಟಿದು ವಿನ: ಮಾಡಿಲ್ಲ, ಆದರೆ ಅಶೋಕ್ ರೈಯವರು ದಿಟ್ಟ ನಿರ್ಧಾರದಿಂದ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಪುತ್ತೂರಿಗೆ ಮೆಡಿಕಲ್ ಕಾಲೇಜ್ ಮಂಜೂರು ಮಾಡಿದ್ದಾರೆ. ದ.ಕ.ಉಡುಪಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಇಲ್ಲ, ಇದೀಗ ಶಾಸಕ ಅಶೋಕ್ ರೈ ಅವರಿಂದ ಪುತ್ತೂರಿನ ಮೆಡಿಕಲ್ ಕಾಲೇಜ್ ಭಾಗ್ಯ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪುಣ್ಯದ ಕೆಲಸ- ಬೂಡಿಯಾರ್ ರಾಧಾಕೃಷ್ಣ ರೈ
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ಬಂಟ ಸಮಾಜದಲ್ಲಿ ಉನ್ನತ ಶಿಕ್ಷಣ ಕಲಿಯಬೇಕೆಂಬ ಇಚ್ಚೆ ಇರುವ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರವನ್ನು ನೀಡುವುದೇ ನಿಜವಾದ ಪುಣ್ಯದ ಕೆಲಸ ಆಗಿದ್ದು, ಈಗಾಗಲೇ ಕೈಕಾರದ ಒರ್ವ ಬಂಟ ವಿದ್ಯಾರ್ಥಿಗೆ ಮೆಡಿಕಲ್ ಶಿಕ್ಷಣಕ್ಕೆ ಪೂರ್ಣ ಸಹಕಾರವನ್ನು ನೀಡಿದ್ದೇವೆ ಎಂದು ಹೇಳಿದರು.
ಸಂಭ್ರಮಿಸುವ ಕಾರ್ಯಕ್ರಮ-ಶಶಿಕುಮಾರ್ ರೈ ಬಾಲ್ಯೊಟ್ಟು
ತಾಲೂಕು ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಬಂಟ ಸಮಾಜ ಭಾಂದವರನ್ನು ಒಂದಡೆ ಸೇರಿಸಿ, ಸಂಭ್ರಮಿಸುವ ಕಾರ್ಯಕ್ರಮ ಇದಾಗಿದ್ದು, ಮುಂದೆಯು ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು.
“ಬಂಟೆರೆ ಕೆಸರ್ಡ್ ಒಂಜಿ ಕುಸಲ್” ಸಮಿತಿಯ ಸಂಚಾಲಕ ದಯಾನಂದ ರೈ ಕೋರ್ಮಂಡ ಹಾಗೂ ಕಾರ್ಯಕ್ರಮಕ್ಕೆ ಗದ್ದೆಯನ್ನು ನೀಡಿದ ಸರಸ್ವತಿ ಹೊಸಲಕ್ಕೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಬಂಟ ಸಮಾಜದ ಹಿರಿಯರಾದ ನಾರಾಯಣ ರೈ ಬಾರಿಕೆ ಮತ್ತು ಸುಂದರ ರೈ ಅವರು ಕ್ರೀಡಾಕೂಟದ ದೀಪ ಬೆಳಗಿಸಿದರು. ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆಗೈದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಸಹಕಾರರತ್ನ ದಂಬೆಕ್ಕಾನ ಸದಾಶಿವ ರೈ, ರಾಜೀವ ರೈ ಕುತ್ಯಾಡಿ, ಮೋಹನ್ ರೈ ನರಿಮೊಗ್ರು, ಮಾತೃ ಸಂಘದ ನಿರ್ದೇಶಕ ಮಿತ್ರಂಪಾಡಿ ಪುರಂದರ ರೈ, ಧಾರ್ಮಿಕ ಪರಿಷತ್ ರಾಜ್ಯ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ಉದ್ಯಮಿ ಶಿವರಾಮ ಆಳ್ವ ಕುರಿಯ, ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಯುವ ಬಂಟರ ವಿಭಾಗದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ಚಲನ ಚಿತ್ರನಟರಾದ ಚೇತನ್ ರೈ ಮಾಣಿ, ದಯಾನಂದ ರೈ ಬೆಟ್ಟಂಪಾಡಿ, ಸುಂದರ ರೈ ಮಂದಾರ, ಬಂಟರ ಸಂಘದ ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ನಿರ್ದೇಶಕರುಗಳಾದ ನಿತಿನ್ ಪಕ್ಕಳ ಮರೀಲ್, ಸತೀಶ್ ರೈ ಕಟ್ಟಾವು, ಸದಾಶಿವ ರೈ ಸೂರಂಬೈಲು, ಸುಧೀರ್ ಶೆಟ್ಟಿ ತೆಂಕಿಲ, ಸದಾನಂದ ಶೆಟ್ಟಿ ಕೂರೇಲು. ಶಶಿಕಿರಣ್ ರೈ ನೂಜಿಬೈಲು, ಶಿವನಾಥ ರೈ ಮೇಗಿನಗುತ್ತು, ರಮೇಶ್ ಆಳ್ವ ಅಲೆಪ್ಪಾಡಿ. ರವಿಪ್ರಸಾದ್ ಶೆಟ್ಟಿ ಬನ್ನೂರು, ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಪ್ರಕಾಶ್ ರೈ ಸಾರಕರೆ, ದಿವ್ಯಾನಾಥ ಶೆಟ್ಟಿ ಕಾವು, ನಾರಾಯಣ ರೈ ಕುಕ್ಕುವಳ್ಳಿ, ತಿಲಕ್ ರೈ ಕುತ್ಯಾಡಿ, ಶಿಕ್ಷಕ ರಾಮಣ್ಣ ರೈ ಕರ್ನೂರು, ತಾಲೂಕು ಮಹಿಳಾ ಬಂಟರ ವಿಭಾಗದ ಕಾರ್ಯದರ್ಶಿ ಕುಸುಮ ಪಿ.ಶೆಟ್ಟಿ, ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ ಉಪಸ್ಥಿತರಿದ್ದರು.
“ಬಂಟೆರೆ ಕೆಸರ್ಡ್ ಒಂಜಿ ಕುಸಲ್” ಅಧ್ಯಕ್ಷ ಸೀತಾರಾಮ ರೈ ಕೈಕಾರ ಸ್ವಾಗತಿಸಿ, ಕಾರ್ಯದರ್ಶಿ ಪ್ರಜ್ವಲ್ ರೈ ತೊಟ್ಲ, ನವೀನ್ ರೈ ಪನಡ್ಕ, ಗಿರೀಶ್ ರೈ ಮೂಲೆ, ತಾಲೂಕು ಬಂಟರ ಸಂಘದ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಬಂಟರ ಸಂಘದ ಕಚೇರಿ ವ್ಯವಸ್ಥಾಪಕಿ ರಂಜಿನಿ ಶೆಟ್ಟಿ ಸಹಿತ ಅನೇಕ ಮಂದಿ ಸಹಕರಿಸಿದರು. ಮನ್ನಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಸತ್ಯನಾರಾಯಣ ರೈ ಕ್ರೀಡಾಕೂಟದ ವಿವರಣೆಗೈದರು.

ಅದ್ದೂರಿ ಕಾರ್ಯಕ್ರಮ- ಅಚ್ಚುಕಟ್ಟು ವ್ಯವಸ್ಥೆ
“ಬಂಟೆರೆ ಕೆಸರ್ಡ್ ಒಂಜಿ ಕುಸಲ್ ಕಾರ್ಯಕ್ರಮ ಅದ್ದೂರಿಯಾಗಿ ಅಚ್ಚುಕಟ್ಟು ವ್ಯವಸ್ಥೆಯಿಂದ ಮೂಡಿ ಬಂತು ಬೆಳಿಗ್ಗೆ ಮತ್ತು ಸಂಜೆ ಉಪಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಾವಿರಾರು ಮಂದಿ ಬಂಟ ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಅಶೋಕ್ ರೈಗೆ ಪ್ರೀತಿಯಿಂದ ಮತ ನೀಡಿ
ಮುಂದೆ ಎರಡುವರೆ ವರ್ಷದಲ್ಲಿ ಚುನಾವಣೆ ನಡೆಯಲಿದ್ದು, ಆ ಸಂದರ್ಭದಲ್ಲಿ ನೀವು ಪಕ್ಷ ನೋಡದೇ ಅಶೋಕ್ ರೈಯವರ ಅಭಿವೃದ್ಧಿ ಕೆಲಸವನ್ನು ಗುರುತಿಸಿ, ಜಾತಿ ಅಪ್ಪೆನ ಮಗೆ ಎಂಬ ಪ್ರೀತಿಯಿಂದ ಮತ್ತೊಮ್ಮೆ ನನ್ನನು ಚುನಾಯಿಸಬೇಕಾಗಿ ಬಂಟ ಸಮಾಜ ಭಾಂದವರಲ್ಲಿ ಅಶೋಕ್ ರೈ ವಿನಂತಿಸಿದರು.